ಮಡಿಕೇರಿ, ಜೂ. ೪: ಹಿಂದೂ ಯುವವಾಹಿನಿಯ ಸಂಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ೫೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾ. ೫ ರಂದು (ಇಂದು) ಜಿಲ್ಲೆಯಲ್ಲಿ ಪೂಜೆ, ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಿಂದೂ ಯುವ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಿಗ್ಗೆ ೯.೩೦ ರಿಂದ ೧೦.೩೦ರ ತನಕ ವಿವಿಧೆಡೆ ಕಾರ್ಯಕ್ರಮಗಳು ನಡೆಯಲಿವೆ. ಪೊನ್ನಂಪೇಟೆಯ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ಸ್ವಚ್ಛತೆ, ಮಡಿಕೇರಿ ಬನ್ನಿ ಮಂಟಪ ಶುಚಿತ್ವ ಕಾರ್ಯ, ಕುಶಾಲನಗರ, ಸೋಮವಾರಪೇಟೆ ಹಾಗೂ ಶನಿವಾರಸಂತೆಯ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿವೆ ಎಂದು ಹಿಂದೂ ಯುವ ವಾಹಿನಿ ರಾಜ್ಯ ಉಪಾಧ್ಯಕ್ಷ ಕುಲದೀಪ್ ಪೂಣಚ್ಚ ತಿಳಿಸಿದ್ದಾರೆ.