ಶನಿವಾರಸಂತೆ, ಜೂ. ೪: ರಸ್ತೆಯಲ್ಲಿ ದನಗಳು ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಸವಾರ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಘಟನೆ ಸಮೀಪದ ಬೆಂಬಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಿ.ವಿ. ಮೋಹನ್ ಚಂದ್ರ ಗಾಯಗೊಂಡ ಸ್ಕೂಟರ್ ಸವಾರ. ಇವರು ತಮ್ಮ ಸಹೋದರನ ಮನೆಗೆ ಹೋಗಿ ಹಿಂದಿರುಗುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪತ್ನಿ ಮೋಹನಾಕ್ಷಿ ಮತ್ತು ಪುತ್ರರಾದ ಧನುಷ್ ಮತ್ತು ತ್ಯಾಗರಾಜ್ ಗಾಯಾಳುವನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಪುತ್ರ ಧನುಷ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಎಸ್‌ಐ ಜಯಕುಮಾರ್ ಪ್ರಕರಣ ದಾಖಲಿಸಿದ್ದಾರೆ.