ಕೂಡಿಗೆ, ಜೂ. ೪: ಕೂಡುಮಂಗಳೂರು ಸಮೀಪದ ದೊಡ್ಡಮ್ಮ ತಾಯಿಯ ದೇವಾಲಯದ ಅವಳಿ ಗ್ರಾಮಗಳ ರಥೋತ್ಸವ ಕಾರ್ಯಕ್ರಮವು ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನಡೆಯಿತು.

ರಥೋತ್ಸವದ ಅಂಗವಾಗಿ ದೊಡ್ಡಮ್ಮ ತಾಯಿ ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ವಿಶೇಷ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದು ರಾತ್ರಿ ೧೨ ಗಂಟೆಗೆ ಕೂಡುಮಂಗಳೂರು ಗ್ರಾಮದ ಒಂದು ರಥ ಮತ್ತು ಕೂಡ್ಲೂರು ಗ್ರಾಮದ ಮತ್ತೊಂದು ರಥವು ಅಲಂಕೃತವಾದ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಅವಳಿ ಗ್ರಾಮಗಳ ರಥೋತ್ಸವದ ಸಮಿತಿಯವರು ಆಯಾ ಗ್ರಾಮದ ಮಾರಮ್ಮ ದೇವಾಲಯದ ಹತ್ತಿರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳ ಸಮೇತ ಜಯ ಘೋಷದೊಂದಿಗೆ ಮತ್ತು ಹಣ್ಣುಕಾಯಿ ಎಡೆಗಳೊಂದಿಗೆ ಮೆರವಣಿಗೆ ಸಾಗಿ ಗ್ರಾಮದ ದೊಡ್ಡಮ್ಮ ತಾಯಿಯ ದೇವರ ಬನಕ್ಕೆ ಆಗಮಿಸಿದವು.

ನಂತರ ದೊಡ್ಡಮ್ಮ ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ನಂತರ ದೇವಿಯ ಗರ್ಭಗುಡಿಯ ಮುಂಭಾಗ ದಲ್ಲಿ ಹಾಕಲಾಗಿದ್ದ ಬೆಂಕಿಕೊAಡವನ್ನು ಪೂಜಿಸಿದ ನಂತರ ಆಗಮಿಸಿದ ಅವಳಿ ಗ್ರಾಮಗಳ ಸಾವಿರಾರು ಭಕ್ತರು ಬೆಂಕಿ ಕೊಂಡವನ್ನು ಹಾಯ್ದು ಪುನೀತರಾದರು.

ಮರುದಿನ ದೇವಾಲಯ ಆವರಣದಲ್ಲಿ ವಿಶೇಷ ಪೂಜೆಗ ಳೊಂದಿಗೆ ಜಾತ್ರೋತ್ಸವ ಕಾರ್ಯಕ್ರಮವು ನಡೆಯಿತು. ಹಬ್ಬದ ಅಂಗವಾಗಿ ಕೂಡುಮಂಗಳೂರು ಕೂಡ್ಲೂರು ಅವಳಿ ಗ್ರಾಮಗಳು ಮತ್ತು ಇದಕ್ಕೆ ಹೊಂದಿಕೊAಡಿರುವ ರಾಜ್ಯ ಹೆದ್ದಾರಿ ರಸ್ತೆಯು ಭವ್ಯ ವಿದ್ಯುತ್ ದೀಪಗಳಿಂದ ಅಲಂಕಾರಗೊAಡಿತು.

ಎರಡು ದಿನಗಳ ಪೂಜಾ ಕೈಂಕರ್ಯಗಳ ಕುಶಾಲನಗರ ಸುಬರಾವ್ ಮತ್ತು ದೇವಸ್ಥಾನ ಅರ್ಚಕರಾದ ಕರಿಯಪ್ಪನವರ ತಂಡದ ನೇತೃತ್ವದಲ್ಲಿ ನಡೆದವು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಟ್ರಸ್ಟ್ ಅಧ್ಯಕ್ಷ ರಾಮಾಚಾರಿ, ಕಾರ್ಯದರ್ಶಿ ಪವನ ಸೇರಿದಂತೆ ಸಮಿತಿಯ ಸದಸ್ಯರು ಎರಡು ಗ್ರಾಮಗಳ ರಥೋತ್ಸವ ಸಮಿತಿಯ ಸದಸ್ಯರು ಸೇರಿದಂತೆ ನಿರ್ದೇಶಕರು ಭಕ್ತಾದಿಗಳು ಭಾಗವಹಿಸಿದ್ದರು.