ಚೆಯ್ಯಂಡಾಣೆ, ಜೂ. ೩: ಸ್ಥಳೀಯ ನರಿಯಂದಡ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡುಬಿಟ್ಟ ಕಾಡಾನೆ ಸೆರೆ ಹಿಡಿಯುವ ಕಾರ್ಯಾ ಚರಣೆಯು ತಾ. ೩ ರಂದು ಕೂಡ ಮುಂದುವರೆದಿತ್ತು. ಚೇಲಾವರ ಹಾಗೂ ಕರಡ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹುಡುಕಾಡಿದರೂ ಯಾವುದೇ ಫಲ ಸಿಗಲಿಲ್ಲ.

ಅರಣ್ಯ ಇಲಾಖೆಗೆ ಸೆರೆ ಹಿಡಿಯಲು ಅನುಮತಿ ಸಿಕ್ಕಿದ ಕಾಡಾನೆಗಳಲ್ಲಿ ಒಂದು ಆನೆಯನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೊಂದು ಹೆಣ್ಣಾನೆ ಕಾರ್ಯಾ ಚರಣೆ ಸಂದರ್ಭ ಬಲಿಯಾಯಿತು. ಹಿಡಿಯಲು ಬಾಕಿ ಇದ್ದ ಒಂದು ಕೊಂಬಿನ ಗಂಡಾನೆ ಬೆಟ್ಟಕ್ಕೆ ಲಗ್ಗೆ ಇಟ್ಟಿರಬಹುದೆಂದು ಅರಣ್ಯ ಇಲಾಖೆ ಯವರು ಶಂಕೆ ವ್ಯಕ್ತಪಡಿಸಿದ್ದಾರೆ. ತಾ. ೪ ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಮಳೆ ಹಾಗೂ ಮೋಡ ಮುಸುಕಿನ ವಾತಾವರಣ ಕಮ್ಮಿಯಾದ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗು ವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.