ಸೋಮವಾರಪೇಟೆ, ಜೂ. ೩: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ನಡೆಸುತ್ತಿರುವ ಜಮೀನನ್ನು ಸಕ್ರಮಗೊಳಿಸಿ ದಾಖಲೆಗಳನ್ನು ನೀಡುವ ಸಂಬAಧ ಫಾರಂ ನಂ ೫೭ರಡಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಕ್ರಮ ಜಮೀನನ್ನು ಸಕ್ರಮಗೊಳಿಸಲು ಸರ್ಕಾರ ನೀಡಿದ್ದ ಅವಧಿಯಲ್ಲಿ ಹಲವಷ್ಟು ರೈತರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಕಂದಾಯ ಇಲಾಖಾ ಸಚಿವರ ಗಮನ ಸೆಳೆಯಲಾಗಿದ್ದು, ಫಾರಂ ನಂ ೫೭ನ್ನು ಸಲ್ಲಿಸಲು ಕಾಲಾವಕಾಶ ವಿಸ್ತರಿಸುವ ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಮನವಿಗೆ ಸ್ಪಂದಿಸಿರುವ ಕಂದಾಯ ಇಲಾಖಾ ಸಚಿವ ಆರ್.ಅಶೋಕ್ ಅವರು, ಅವಧಿ ವಿಸ್ತರಿಸುವ ಬಗ್ಗೆ ಭರವಸೆ ನೀಡಿದ್ದು, ಸದ್ಯದಲ್ಲಿಯೇ ಈ ಬಗ್ಗೆ ಅಧಿಕೃತ ಆದೇಶ ಹೊರಬರಲಿದೆ ಎಂದು ರಂಜನ್ ತಿಳಿಸಿದರು.
ನೆರೆಯ ಕೇರಳ ರಾಜ್ಯದಲ್ಲಿರು ವಂತೆ ಸರ್ಕಾರಿ ಜಮೀನು ಒತ್ತುವರಿ ದಾರರಿಗೆ ೩೦ ವರ್ಷಗಳವರೆಗೆ ಜಾಗವನ್ನು ಭೋಗ್ಯಕ್ಕೆ ನೀಡುವ ಬಗ್ಗೆಯೂ ಸರ್ಕಾರ ಗಮನ ಹರಿಸಿದೆ. ೫ ಎಕರೆ ಮೇಲ್ಪಟ್ಟು ಜಾಗ ಹೊಂದಿರುವವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಕೈಗೊಂಡಿದ್ದರೆ, ಅಂತಹವರಿಗೆ ಜಾಗವನ್ನು ಭೋಗ್ಯಕ್ಕೆ ನೀಡಲಾಗು ವುದು. ಇದಕ್ಕೆ ನಿಗದಿತ ಶುಲ್ಕ ವಿಧಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ಸಭೆಯಲ್ಲಿ ಕುಶಾಲನಗರ ತಾಲೂಕಿಗೆ ಸಂಬAಧಿಸಿದAತೆ ಮೊದಲ ಸಭೆಯಲ್ಲಿ ೧೧ ಅರ್ಜಿಗಳು, ೨ನೇ ಸಭೆಯಲ್ಲಿ ೫ ಸೇರಿದಂತೆ ಒಟ್ಟು ೧೬ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಸೋಮವಾರಪೇಟೆ ತಾಲೂಕಿಗೆ ಸಂಬAಧಿಸಿದAತೆ ಪ್ರಥಮ ಸಭೆಯಲ್ಲಿ ೨೭ ಹಾಗೂ ಎರಡನೇ ಸಭೆಯಲ್ಲಿ ೧೮ ಅರ್ಜಿಗಳು ಸೇರಿದಂತೆ ಒಟ್ಟು ೪೫ ಅರ್ಜಿಗಳನ್ನು ಪರಿಶೀಲನೆ ಮಾಡ ಲಾಗುತ್ತಿದೆ. ಒಟ್ಟು ೬೧ ಅರ್ಜಿಗಳು ಸಭೆಯಲ್ಲಿ ಮಂಡನೆ ಯಾಗಿದ್ದು, ಕ್ರಮ ಬದ್ಧವಾಗಿರುವ ಅರ್ಜಿಗಳಿಗೆ ಮಂಜೂರಾತಿ ನೀಡಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಸಮಿತಿ ಸಸ್ಯರುಗಳಾದ ಕೊಮಾರಪ್ಪ, ಕೆಂಚೇಶ್ವರ್, ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ಸೇರಿದಂತೆ ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.