ಸಿದ್ದಾಪುರ, ಜೂ. ೩: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡAಗೇರಿ ಗ್ರಾಮದಿಂದ ಅಮ್ಮತ್ತಿ ಕಡೆಗೆ ಹೋಗುವ ಮುಖ್ಯ ರಸ್ತೆ ಬಳಿ ಅಪರಿಚಿತ ಮೃತ ದೇಹವು ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಿದ್ದು, ಮೃತ ಶರೀರವು ಕೊಳೆತ ಸ್ಥಿತಿಯಲ್ಲಿರುವುದರಿಂದ ಯಾವುದೇ ಗುರುತು ಪತ್ತೆ ಆಗಿರುವುದಿಲ್ಲ. ಅಂದಾಜು ಪ್ರಾಯ ೪೫ ರಿಂದ ೫೦ ವಯಸ್ಸಿನ ಪುರುಷ ಮೃತದೇಹವಾಗಿದ್ದು, ಯಾವುದಾದರೂ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದಲ್ಲಿ ಅಥವಾ ಯಾರಾದರೂ ವಾರಸುದಾರರು ಕಂಡು ಬಂದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯನ್ನ್ಲು ಸಂಪರ್ಕಿಸುವAತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೦೮೦೪೯೫೦, ೦೮೨೭೪೨೫೮೩೩೩, ೭೨೫೯೪೩೩೯೩೩ ಸಂಪರ್ಕಿಸಬಹುದಾಗಿದೆ.