ಮಡಿಕೇರಿ, ಜೂ. ೩: ಜಿಲ್ಲೆಯ ಸುಂಟಿಕೊಪ್ಪದವರಾದ ಅಜ್ಜಿಕುಟ್ಟೀರ ಅಧೀತ್ ಕಾರ್ಯಪ್ಪ ಅವರು ಡಾಕ್ಟರೇಟ್ ಪದವಿ (ಪಿ.ಹೆಚ್.ಡಿ) ಪಡೆದು ಸಾಧನೆ ಮಾಡಿದ್ದಾರೆ.

ಕೃಷಿ ವಿಜ್ಞಾನದಲ್ಲಿ ಅರ್ಥಶಾಸ್ತç ವಿಭಾಗವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು Iಅಂಖ ಓಚಿಣioಟಿಚಿಟ ಆಚಿiಡಿಥಿ ಖeseಚಿಡಿಛಿh Iಟಿsಣiಣuಣioಟಿ, ಹರಿಯಾಣದಲ್ಲಿ ಡಾ. ಬಿ.ಎಸ್. ಚಂದೇಲ್ ಅವರ ಮಾರ್ಗದರ್ಶನದೊಂದಿಗೆ ಡಾಕ್ಟರೇಟ್ ಪದವಿಯನ್ನು (Ph.ಆ) ಪಡೆದುಕೊಂಡಿರುತ್ತಾರೆ.

ಪ್ರಾಥಮಿಕ ಶಿಕ್ಷಣವನ್ನು ಸುಂಟಿಕೊಪ್ಪದ ಸೈಂಟ್ ಮೇರಿಸ್ ಶಾಲೆ, ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ನವೋದಯ ವಿದ್ಯಾಲಯ, ಗಾಳಿಬೀಡು ಮಡಿಕೇರಿಯಲ್ಲಿ ಮುಗಿಸಿ, ಃ.Sಛಿ. (ಂg) ಪದವಿಯನ್ನು ಉಏಗಿಏ ಬೆಂಗಳೂರಿನಲ್ಲು, ಒSಛಿ. (ಂg) ಸ್ನಾತಕೋತ್ತರ ಪದವಿಯನ್ನು ಂgಡಿiಛಿuಟಣuಡಿe ಇಛಿoಟಿomiಛಿ ವಿಷಯದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಮುಗಿಸಿದ್ದಾರೆ.

‘ಂgಡಿiಛಿuಟಣuಡಿe ಇಛಿoಟಿomiಛಿs’ ವಿಷಯದಲ್ಲಿ ವಿಶೇಷ ಆಸಕ್ತಿಯಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ತೇರ್ಗಡೆಗೊಂಡು ಹರಿಯಾಣದ ಐಸಿಎಆರ್ ನ್ಯಾಷನಲ್ ಡೈರಿ ರೀಸರ್ಚ್ ಇನ್ಸ್ಟಿಟ್ಯೂಟ್ ಮಹಾಸಂಸ್ಥೆಯಲ್ಲಿ ಕಳೆದ ೪ ವರ್ಷಗಳಿಂದ ಅಧ್ಯಯನ ಮಾಡಿ ಮಹಾಪ್ರಬಂಧ ಮಂಡಿಸಿ ಇದೀಗ Ph.ಆ ಪದವಿಯನ್ನು ಪಡೆದುಕೊಂಡಿರುತ್ತಾರೆ.

ರೈತರ ಆದಾಯ ಹೆಚ್ಚಿಸುವಲ್ಲಿ ಆರ್ಥಿಕತೆಯ ಸುಧಾರಣೆ ಮತ್ತು ಅರ್ಥಶಾಸ್ತçದ ಪಾತ್ರ ವಿಷಯದಲ್ಲಿ ಬಹಳಷ್ಟು ಜರ್ನಲ್ ಆರ್ಟಿಕಲ್ಸ್ ಹಾಗೂ ಪ್ರಬಂಧಗಳನ್ನು ಬರೆದು ಹಲವು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಪ್ರಕಟಣೆಗೊಂಡು ಹಲವಾರು ಪ್ರಶಂಸೆ ಮತ್ತು ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

ಡಾ. ಅಧೀತ್ ಕಾರ್ಯಪ್ಪ ಅವರು ಮಡಿಕೇರಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಹಾಗೂ ಕ.ಕೊ.ಸಾ. ಅಕಾಡೆಮಿಯ ರಿಜಿಸ್ಟಾರ್ ಅಜ್ಜಿಕುಟ್ಟೀರ ಸಿ ಗಿರೀಶ್ ಹಾಗೂ ಕುಶಾಲನಗರ ಸರಕಾರಿ ಕಾಲೇಜಿನ ಉಪನ್ಯಾಸಕಿ ಸುನಿತಾ ಗಿರೀಶ್ ಅವರ ಪುತ್ರ. ಪ್ರಸ್ತುತ ನವದೆಹಲಿಯಲ್ಲಿ ನೀತಿ ಆಯೋಗ (Pಚಿಟಿಟಿiಟಿg ಅommissioಟಿ oಜಿ Iಟಿಜiಚಿ) ಕೃಷಿ ವಿಭಾಗದಲ್ಲಿ ಕಿರಿಯ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂಗಿ ಡಾ. ದರ್ಶಿನಿ ಗೌರಮ್ಮ ಕೂಡ ಪ್ರಸ್ತುತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಇಂಟರ್ನ್ ಡಾಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.