ಚೆಯ್ಯಂಡಾಣೆ, ಜೂ ೨. ನರಿಯಂದಡ ಹಾಗೂ ಕುಂಜಿಲ ಕಕ್ಕಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀಡುಬಿಟ್ಟ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯು ತಾ. ೨ ರಂದು ಕೂಡ ಮುಂದುವರೆದಿತ್ತು. ಚೇಲಾವರ ಹಾಗೂ ಕರಡ ಗ್ರಾಮಗಳಲ್ಲಿ ಹುಡುಕಾಡಿದರೂ ಯಾವುದೇ ಫಲ ಸಿಗಲಿಲ್ಲ. ಕಾಡಾನೆಗಳು ಮಲೆತಿರಿಕೆ ಬೆಟ್ಟದ ತಪ್ಪಲಿಗೆ ಲಗ್ಗೆ ಇಟ್ಟಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ತಾ. ೩ ರಂದು (ಇಂದು) ಕಾರ್ಯಾಚರಣೆ ಮುಂದುವರಿಯಲಿದೆ.