ಮಡಿಕೇರಿ, ಜೂ. ೨: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೨೨೨ನೇಯ ರ‍್ಯಾಂಕ್‌ಗಳಿಸುವ ಮೂಲಕ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿರುವ ಮುಂಡAಡ ರಾಜೇಶ್ ಪೊನ್ನಪ್ಪ ಅವರು ‘ಇಂಡಿಯನ್ ಫಾರಿನ್ ಸರ್ವೀಸ್’ (ಐಎಫ್‌ಎಸ್)ನತ್ತ ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು ಇಂಡಿಯನ್ ಫಾರಿನ್ ಸರ್ವೀಸ್ ಬಗ್ಗೆ ತಮಗೆ ಮೊದಲಿನಿಂದಲೂ ಹೆಚ್ಚಿನ ಒಲವು ಇತ್ತು. ಇದೀಗ ಫಲಿತಾಂಶದ ಬಳಿಕ ಈ ವಿಭಾಗಕ್ಕೆ ತಾವು ಮೊದಲ ಆದ್ಯತೆ ನೀಡಿರುವುದಾಗಿ ತಿಳಿಸಿದರು. ಐಪಿಎಸ್ ಅನ್ನು ಎರಡನೇ ಹಾಗೂ ಐಎಎಸ್ ಅನ್ನು ಮೂರನೇ ಆದ್ಯತೆಯಾಗಿ ಪರಿಗಣಿಸಿ ಬರೆದುಕೊಟ್ಟಿರುವುದಾಗಿ ಅವರು ತಿಳಿಸಿದರು. ಫಾರಿನ್ ಸರ್ವೀಸ್ ಮೂಲಕ ಭಾರತವನ್ನು ಅಂತರರಾಷ್ಟçಮಟ್ಟದಲ್ಲಿ ಪ್ರತಿನಿಧಿಸುವುದು ಹೆಚ್ಚು ಹೆಮ್ಮೆ ತರಲಿದೆ. ಒಂದು ವೇಳೆ ಇದು ಸಿಗದಿದ್ದಲ್ಲಿ ಕೊಡಗಿನವರು, ಹೆಚ್ಚು ಆಸಕ್ತಿ ತೋರುವ ಸಮವಸ್ತç ಧರಿಸುವ ಐಪಿಎಸ್ ಅನ್ನು ಆಯ್ಕೆ ಮಾಡಿಕೊಳ್ಳಲಿರುವುದಾಗಿ ಹೇಳಿದರಲ್ಲದೆ, ಇದೂ ಕೂಡ ಹೆಮ್ಮೆಯ ಅಂಶ ಎಂದರು.
ತಮ್ಮ ಈ ಸಾಧನೆಗೆ ಪೋಷಕರು, ಬಂಧುಗಳ ಪ್ರೋತ್ಸಾಹದೊಂದಿಗೆ ನಮ್ಮ ಕೆಪಿಎಸ್‌ಸಿ ಸಂಸ್ಥೆಯ ಡೈರೆಕ್ಟರ್ ಕೊಡಗಿನವರಾದ ಡಾ|| ಅರ್ಜುನ್‌ಬೋಪಣ್ಣ ಅವರ ಮಾರ್ಗದರ್ಶನ, ಉತ್ತೇಜನ ಕಾರಣ ಎಂದು ರಾಜೇಶ್ ಸ್ಮರಿಸಿದರು. ಇಂಜಿನಿಯರಿAಗ್‌ನಲ್ಲಿ ಹಾಗೂ ಕಾನೂನು ಪದವಿಯಲ್ಲೂ ವಿ.ವಿ.ಗೆ ಮೊದಲಿಗರಾಗಿ ಇವರು ಸಾಧನೆ ಮಾಡಿದ್ದು, ಇದೀಗ ಯುಪಿಎಸ್‌ಸಿಯಲ್ಲಿ ೨೨೨ನೇಯ ರ‍್ಯಾಂಕ್‌ಗಳಿಸಿದ್ದಾರೆ.
ಕೊಡಗಿನವರು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದ ಅವರು, ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳು ಮುಂದೆ ಬರಬೇಕು. ಇದಕ್ಕೆ ಪೋಷಕರ ಬೆಂಬಲ ಹಾಗೂ ಇದರೊಂದಿಗೆ ಈ ಕುರಿತಾಗಿ ಸೂಕ್ತ ಆರಂಭಿಕ ಮಾರ್ಗದರ್ಶನ ಅಗತ್ಯ ಎಂದು ಅವರು ನುಡಿದರು. ಕ್ರೀಡೆಯಲ್ಲಿಯೂ ಸಾಧಕರಾಗಿರುವ ರಾಜೇಶ್ ಪೊನ್ನಪ್ಪ (ಈಕ್ವೆಸ್ಟೇರಿಯನ್) ಕಾನೂನು ಕುರಿತಾಗಿ ತಮ್ಮ ಅನುಭವದಂತೆ ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಇದು ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಇದರೊಂದಿಗೆ ಇವರ ಮುತ್ತಜ್ಜ ಪೇರಿಯಂಡ ಚಂಗಪ್ಪ ಅವರು ೧೯೫೦ - ೬೦ರ ದಶಕದಲ್ಲಿ ಬರೆದಿದ್ದ ‘ಕೊಡವಡ ಅಂದೋಳತ ಪಾಟ್’ ಪುಸ್ತಕವನ್ನು ಪುನರ್ ರಚನೆ ಹಾಗೂ ಮುದ್ರಣ ಮಾಡಿದ್ದು, ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ.
ಸಹಕಾರದ ಭರವಸೆ
ತಾವೇ ಸ್ವತಃ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವದರೊಂದಿಗೆ ಇತರರಿಗೂ ಕೋಚಿಂಗ್ ನೀಡುತ್ತಿದ್ದ ರಾಜೇಶ್, ಮುಂದಿನ ದಿನಗಳಲ್ಲಿ ಕೊಡಗಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಮುಂದೆ ಬಂದಲ್ಲಿ ತಮ್ಮಿಂದಾಗುವ ಮಾರ್ಗದರ್ಶನ ಒದಗಿಸಲು ಸಿದ್ಧವಿರುವುದಾಗಿ ಹೇಳಿದರು.
ಛಲ, ನಿರ್ದಿಷ್ಟ ಗುರಿ, ಆಸಕ್ತಿಯೊಂದಿಗೆ ಪ್ರಯತ್ನ ನಡೆಸಿದರೆ ಯಶಸ್ಸು ಖಚಿತ. ಕೆಲವರು ಇತರ ಪದವಿ, ಸಂದರ್ಭ ಪರೀಕ್ಷೆ ಹತ್ತಿರವಾದಂತೆ ಒಂದೆರಡು ದಿನಗಳ ಕಾಲ ಭಾರೀ ಹುಮ್ಮಸ್ಸಿನಿಂದ ಓದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಇಂತಹ ಪ್ರಯತ್ನ ನಿರಂತರವಾಗಿರಬೇಕು ಎಂಬದು ತಮ್ಮ ಅಭಿಪ್ರಾಯವಾಗಿದೆ ಎಂದು ರಾಜೇಶ್ ಸಲಹೆಯಿತ್ತರು. ಇವರು ನೆಲಜಿಯವರಾದ ಮುಂಡAಡ ಜಯಾ ಪೂವಯ್ಯ ಹಾಗೂ ಸುಧಾ ಪೂವಯ್ಯ ಅವರ ಪುತ್ರ.
- ಶಶಿ