ಮಡಿಕೇರಿ, ಜೂ. ೧: ಮುಂಗಾರು ಮಳೆ ಆರಂಭದ ಮುನ್ಸೂಚನೆ ಕಂಡುಬರುತ್ತಿದ್ದು, ತಾ. ೨ ರಿಂದ (ಇಂದಿನಿAದ) ನಿಧಾನಗತಿಯಲ್ಲಿ ಮಳೆ ಸುರಿಯುವ ಸಾಧ್ಯತೆ ಕುರಿತು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿ ತಿಳಿಸಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಕಳೆದ ರಾತ್ರಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಪ್ರಸ್ತುತ ಬಿಸಿಲು ಗೋಚರಿಸುತ್ತಿದ್ದರೂ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದೆ. ತಕ್ಷಣದಿಂದಲೇ ಜಿಲ್ಲೆಯಲ್ಲೂ ಮುಂಗಾರು ಪ್ರಾರಂಭದ ಮುನ್ಸೂಚನೆ ಕಂಡುಬರುತ್ತಿದ್ದು ಮೋಡದ ವಾತಾವರಣವೂ ಆವರಿಸುತ್ತಿದೆ. ಒಂದು ವಾರದ ತನಕ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ನಂತರ ತುಸು ವಿರಾಮ ಸಿಗಬಹುದು. ಇದಾದ ನಂತರದಲ್ಲಿ ಮಳೆಯ ಪ್ರಮಾಣ ಬಿರುಸುಗೊಳ್ಳಲಿದೆ ಎಂದು ಕೆ.ವಿ.ಕೆ. ಮಾಹಿತಿ ತಿಳಿಸಿವೆ.