ಮಡಿಕೇರಿ, ಜೂ. ೧: ಅಮೇರಿಕಾದ ‘ಟೆಕ್ಸಸ್ ಎ ಆ್ಯಂಡ್ ಎಮ್’ ವಿಶ್ವವಿದ್ಯಾಲಯ ನೀಡುವ ‘ದಿ ಕೇಯ್ನ್ ಫೆಲೋಶಿಪ್’ ಪ್ರಶಸ್ತಿಗೆ ಮೂಲತಃ ಜಿಲ್ಲೆಯ ಹುದಿಕೇರಿಯವರಾದ ಚೋನೀರ ಡಾ.ವಿಕಾಸ್ ಅವರು ಭಾಜನರಾಗಿ ದ್ದಾರೆ. ಮಾನವನ ದೇಹದಲ್ಲಿನ ನೈಸರ್ಗಿಕವಾಗಿ ಉತ್ಪತ್ತಿಯಾಗುವ, ಕೋವಿಡ್ ವಿರುದ್ಧ ಹೋರಾಡಬಲ್ಲ ಪ್ರೊಟೀನ್ ಅನ್ನು ಅನುವಂಶಿಕವಾಗಿ ಡ್ರಗ್ ರೂಪದಲ್ಲಿ ತಯಾರಿಸಿದ ಸಾಧನೆಗಾಗಿ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿಯು ನಗದು ೨೫,೦೦೦ ಡಾಲರ್ ಅನ್ನು ಹೊಂದಿದ್ದು ವಿಜ್ಞಾನ ವಲಯದಲ್ಲಿ ಸಂಶೋಧನೆ ನಡೆಸಲು ಕೂಡ ಅವಕಾಶ ಗಳು ದೊರಕಲಿದೆ.

‘ಮಾಲಿಕ್ಯುಲರ್ ಬಯಾಲಜಿಸ್ಟ್’ ಆಗಿರುವ ವಿಕಾಸ್ ಅವರು ತಮ್ಮ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ್ದಾರೆ. ‘ಟೆಕ್ಸಸ್ ಎ ಆ್ಯಂಡ್ ಎಮ್’ ಕಾಲೇಜಿನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿ ರುವ ವಿಕಾಸ್ ಅವರು ಮಂಗಳೂರು ಕೆಮಿಕಲ್ಸ್ ಹಾಗೂ ಫರ್‌ಟಿಲೈರ‍್ಸ್ನ ನಿವೃತ್ತ ಡಿ.ಜಿ.ಎಮ್ ಚೋನೀರ ಟಿ. ಕಾರ್ಯಪ್ಪ ಹಾಗೂ ಪ್ರಾಧ್ಯಾಪಕಿ ಡಾ.ಗೀತಾ ಕಾರ್ಯಪ್ಪ (ತಾಮನೆ- ಪುಲಿಯಂಡ) ದಂಪತಿಯ ಪುತ್ರ.