ಸೋಮವಾರಪೇಟೆ, ಜೂ. ೧: ಮಂಗಳೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಪಕ್ಷದ ಮುಖಂಡ ಅಪ್ಸರ್ ಕೊಡ್ಲಿಪೇಟೆ ಅವರು ಗೋ ಮಾಂಸದ ವಿಚಾರವಾಗಿ ದಲಿತರ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಭಜರಂಗದಳದ ಪ್ರಮುಖರು, ಅಪ್ಸರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸ್ ದೂರು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಜರಂಗದಳ ತಾಲೂಕು ಸಂಚಾಲಕ ಜೀವನ್ ನೇಗಳ್ಳೆ ಅವರು, ಅಪ್ಸರ್ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನಕ್ಕೆ ಮುಂದಾಗಿರುವ ನಾಯಕರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಭಜರಂಗದಳ ತಾಲೂಕು ಪ್ರಚಾರ ಪ್ರಮುಖ್ ಪ್ರದೀಪ್, ಶನಿವಾರಸಂತೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಉಮಾಸುತ, ಶನಿವಾರಸಂತೆ ಭಜರಂಗದಳ ಸಂಚಾಲಕ ತನ್ಮಯ್, ಕಾರ್ಯಕರ್ತ ಧನು ಅವರುಗಳು ಉಪಸ್ಥಿತರಿದ್ದರು.