ವೀರಾಜಪೇಟೆ, ಜೂ. ೧: ಕೊಡಗಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ನೂತನ ವ್ಯವಸ್ಥಾಪಕರಾಗಿ ರೆ.ಫಾ. ಐಸಾಕ್ ರತ್ನಾಕರ್ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಹಾಗೂ ವ್ಯವಸ್ಥಾಪಕರಾಗಿದ್ದ ರೆ.ಫಾ. ಮದಲೈಮುತ್ತು ಎಂ.ಡಿ.ಎಸ್.ನ ಕೋಶಾಧಿಕಾರಿಯಾಗಿ ವರ್ಗಾವಣೆ ಯಾದ ಹಿನ್ನೆಲೆಯಲ್ಲಿ ಐಸಾಕ್ ರತ್ನಾಕರ್ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ.

ವರ್ಗಾವಣೆಗೊAಡ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ನೂತನ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಧರ್ಮಾಧ್ಯಕ್ಷ ಬಿಷಪ್ ಡಾ. ಕೆ.ಎ. ವಿಲಿಯಂ ಮಾತನಾಡಿ, ಧರ್ಮಗುರುಗಳು ಆಧ್ಯಾತ್ಮಿಕ ಜೀವನದ ಜೊತೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಧರ್ಮಗುರುಗಳ ಪಾತ್ರ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಷಪ್ ರೊಜಾರಿಯೋ, ಎಂ.ಡಿ.ಎಸ್. ಕಾರ್ಯದರ್ಶಿ ರೆ.ಫಾ. ವಿಜಯ ಕುಮಾರ್, ರೆ.ಫಾ. ಜೇಮ್ಸ್, ಪದವಿ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್, ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ದಯಾನಂದ ಪ್ರಭು, ಸಹಾಯಕ ಧರ್ಮಗುರುಗಳಾದ ಯೇಸು ಪ್ರಸಾದ್, ವಿದ್ಯಾರ್ಥಿಗಳು ಶಿಕ್ಷಕರು ಹಾಜರಿದ್ದರು. ನೂತನ ವ್ಯವಸ್ಥಾಪಕ ಫಾ. ಐಸಾಕ್ ರತ್ನಾಕರ್ ಕೃಷ್ಣರಾಜನಗರದ ಡೋರ್ನಹಳ್ಳಿಯ ಸಂತ ಅಂಥೋನಿಯವರ ಮೈನರ್ ಬಸಿಲಿಕಾದಲ್ಲಿ ಆಡಳಿತಾಧಿಕಾರಿ ಯಾಗಿದ್ದರು.