ಮಡಿಕೇರಿ, ಜೂ. ೧: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಇದರ ವ್ಯವಸ್ಥಾಪಕರಾಗಿದ್ದ ಕೆ.ಯನ್. ಚೋಂದಮ್ಮ ಮೇದಪ್ಪ ಅವರು ನಿವೃತ್ತಿ ಹೊಂದಿದ್ದು, ಇವರಿಗೆ ಸಂಸ್ಥೆ ಮತ್ತು ಕೊಡವ ಸಮಾಜ ಮಡಿಕೇರಿ ಇವರುಗಳ ಸಂಯುಕ್ತಾಶ್ರಯ ದೊಂದಿಗೆ ಕೊಡವ ಸಮಾಜ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸ ಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷರಾದ ಕೆ.ಯಸ್. ದೇವಯ್ಯ ವಹಿಸಿದ್ದರು. ಸಹಕಾರಿಯ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಚೋಂದಮ್ಮ ಅವರ ಸೇವೆಯನ್ನು ಸ್ಮರಿಸಿದರು. ಕೊಡವ ಸಮಾಜದ ಅಧ್ಯಕ್ಷ ದೇವಯ್ಯ, ಸಹಕಾರಿಯ ನಿರ್ದೇಶಕರುಗಳಾದ ಮಣವಟ್ಟೀರ ಬಿ. ಮಾಚಯ್ಯ, ಚೋವಂಡ ಡಿ. ಕಾಳಪ್ಪ, ಕೊಂಗಾAಡ ಎ. ತಿಮ್ಮಯ್ಯ, ಕುಡುವಂಡ ಬಿ. ಉತ್ತಪ್ಪ ಹಾಗೂ ಉಪಾಧ್ಯಕ್ಷೆ ಯಂ.ಜಿ. ಉಷಾ ಅವರು ಮಾತನಾಡಿದರು.
ಸಮಾರಂಭದಲ್ಲಿ ಕೊಡಗು ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಅರೆಯಡ ಪಿ. ರಮೇಶ್, ಆಡಳಿತ ಮಂಡಳಿ ಸದಸ್ಯರು ಹಾಗೂ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ, ವಿದ್ಯಾನಿಧಿಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.