ಶನಿವಾರಸಂತೆ, ಜೂ. ೧: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್ನ ವಾರ್ಷಿಕ ಹಬ್ಬ ಜೂ. ೫ರಂದು ಸಂಜೆ ೫ ಗಂಟೆಗೆ ನಡೆಯಲಿದೆ.
ಬಲಿಪೂಜೆಯೊಂದಿಗೆ ಹಬ್ಬ ಪ್ರಾರಂಭವಾಗಲಿದ್ದು, ನಂತರ ಗ್ರಾಮದಲ್ಲಿ ಮೆರವಣಿಗೆ ಮಾಡಿ ಏಸುಕ್ರಿಸ್ತ ಮತ್ತು ಮೇರಿಯಮ್ಮನ ಆರಾಧನೆ ವಿಶೇಷ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮೈಸೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು, ಚಿಕ್ಕಮಗಳೂರು ಧರ್ಮ ಪ್ರಾಂತ್ಯದ ಮಹಾ ಧರ್ಮಗುರುಗಳು ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆಯ ಚರ್ಚ್ಗಳ ಧರ್ಮಗುರುಗಳು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸಂತ ಅಂತೋಣಿ ಚರ್ಚ್ನ ಧರ್ಮಗುರು ಜೇಕಬ್ ಕೊಳನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.