ಕಣಿವೆ, ಜೂ. ೧: ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಮಳೆಬಿಲ್ಲು ಕಾರ್ಯಕ್ರಮದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯಬಹುದಾಗಿದೆ ಎಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಅನುಸೂಯ ಹೇಳಿದರು.
ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಳೆಬಿಲ್ಲು ಇತಿಹಾಸ ಹಬ್ಬ ಮತ್ತು ನಕ್ಷö್ಯ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಕ್ಕಳು ಸಂಗ್ರಹಿಸಿದ ಹಳೆಯ ಸಾಮಗ್ರಿಗಳು ಹಾಗೂ ನಕ್ಷೆಗಳನ್ನು ವೀಕ್ಷಿಸಿ ಮಾತನಾಡಿದರು.
ಸರ್ಕಾರದ ಇಂತಹ ವಿನೂತನ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಸಂಶೋಧನಾತ್ಮಕ ಮನೋಭಾವ ಬೆಳೆಯುತ್ತದೆ ಎಂದು ಅವರು ಹೇಳಿದರು. ಮೊದಲನೆಯ ದಿನ ಆಟದ ಹಬ್ಬ ಎರಡನೇ ದಿನ ಆಟಿಕೆ ಮೇಳ. ಮೂರನೆಯ ದಿನ ನಾಟಕದ ದಿನ. ನಾಲ್ಕನೇ ದಿನ ನಾಟಕದ ದಿನ. ಐದನೇ ದಿನ ಚಿತ್ರ ಚಿತ್ತಾರ ಕಲಾ ಹಬ್ಬ. ಆರನೇ ದಿನ ಚಿತ್ರ ಜಗತ್ತು. ಏಳನೇ ದಿನ ಕಥೆಗಳ ಹಬ್ಬ. ಎಂಟನೆ ದಿನ ಕವಿತೆ ಕಟ್ಟೋಣ ಹಾಡು. ಒಂಭತ್ತನೇ ದಿನ ಪರಿಸರ ಹಬ್ಬ. ಹತ್ತನೇ ದಿನ ಗಣಿತದ ಗಮ್ಮತ್ತು. ಹನ್ನೊಂದನೇ ದಿನ ಇತಿಹಾಸದ ಹಬ್ಬ. ಹನ್ನೆರಡು ದಿನ ಅಡುಗೆ ಮನೆಯಲ್ಲೇ ವಿಜ್ಞಾನ. ಹದಿಮೂರನೇ ದಿನ ಗೊಂಚಲು ಸಾಂಸ್ಕೃತಿಕ ಸಂಭ್ರಮ. ಹದಿನಾಲ್ಕನೇ ದಿನ ಮಂಗಳವಾರ ಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ತಳಿರು ತೋರಣಗಳಿಂದ ಶೃಂಗರಿಸಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಾಲಾ ಮುಖ್ಯ ಶಿಕ್ಷಕಿ ಸಣ್ಣಕ್ಕ, ಶಿಕ್ಷಕಿಯರಾದ ವಿಜಯಲಕ್ಷಿö್ಮ, ಕಮಲಾ, ದೀಪಿಕಾ ಹಾಗೂ ಶಾಲಾ ಎಸ್ಡಿಎಂಸಿ ಎಲ್ಲಾ ಸರ್ವ ಸದಸ್ಯರು ಹಾಗೂ ಪೋಷಕರು ಇದ್ದರು.