ಇAಡೋನೇಶಿಯಾ, ಜೂ. ೧ : ಇಂಡೋನೇಶಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಕಂಚಿನ ಪದಕಕ್ಕೆ ತೃಪ್ತಿಗೊಂಡಿದೆ. ಇಂದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜಪಾನ್ ರಾಷ್ಟçವನ್ನು ೧-೦ ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಟೂರ್ನಿಯಲ್ಲಿ ೩ನೇ ಸ್ಥಾನ ಗಳಿಸಿದೆ. ಸೂಪರ್ ೪ ಹಂತದಲ್ಲಿ ಭಾರತವು ಜಪಾನ್ ವಿರುದ್ಧ ಪಂದ್ಯವನ್ನು ಗೆದ್ದು ದಕ್ಷಿಣ ಕೊರಿಯಾ ಹಾಗೂ ಮಲೇಷಿಯಾ ವಿರುದ್ಧ ಡ್ರಾ ಗೆ ತೃಪ್ತಿಗೊಂಡಿತ್ತು. ಈ ಮೂಲಕ ಸೂಪರ್ ೪ ಹಂತದಲ್ಲಿ ೫ ಪಾಯಿಂಟ್‌ಗಳನ್ನು ಗಳಿಸಿತ್ತು. ಮಲೇಶಿಯಾ ಹಾಗೂ ದಕ್ಷಿಣ ಕೊರಿಯಾ ಕೂಡ ೫ ಪಾಯಿಂಟ್ ಗಳಿಸಿದ್ದವು. ಆದರೆ ಭಾರತದ ‘ಗೋಲ್ ಡಿಫರೆನ್ಸ್' ಇವೆರಡು ರಾಷ್ಟçಗಳಿಗಿಂತ ಕಡಿಮೆ ಇದ್ದ ಕಾರಣ ಫೈನಲ್ ಪ್ರವೇಶಿಸಲು ವಿಫಲವಾಯಿತು.

ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವು ಮಲೇಷಿಯಾ ವಿರುದ್ಧ ೨-೧ ಗೋಲುಗಳಿಂದ ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮಲೇಷಿಯಾ ಬೆಳ್ಳಿ ಪದಕ ಪಡೆದುಕೊಂಡಿತು.