*ಗೋಣಿಕೊಪ್ಪ, ಮೇ ೩೧: ಅರಣ್ಯ ಇಲಾಖೆಗೆ ೪೮ ಎಕರೆ ಕಂದಾಯ ಜಾಗವನ್ನು ಮುಕ್ಕೋಡ್ಲು ಗ್ರಾಮದಲ್ಲಿ ನೀಡುವ ಮೂಲಕ ಕೂಟಿಯಾಲ ಬಿ. ಶೆಟ್ಟಿಗೇರಿ ಸಂಪರ್ಕ ರಸ್ತೆ, ಚೆಟ್ಟಿಮಾನಿ-ದಬ್ಬಡ್ಕ-ಕರಿಕೆ ರಸ್ತೆ ಮತ್ತು ಕಡಮಕಲ್ಲು-ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಎದುರಾದ ತೊಡಕನ್ನು ಸರಿಪಡಿಸಲಾಗಿದ್ದು, ಮಳೆಗಾಲ ಮುಗಿದ ತಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.
ಬಿರುನಾಣಿ - ಕೂಟಿಯಾಲ ಸೇತುವೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿರುನಾಣಿ ಗ್ರಾ.ಪಂ. ಆಡಳಿತ, ಇಂಜಿನಿಯರ್ಗಳೊAದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿ ನಡೆಸಲು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಪತ್ರ ವ್ಯವಹಾರ ಬಾಕಿಯಿದ್ದು, ಶೀಘ್ರದಲ್ಲಿಯೇ ಮುಗಿಯಲಿದೆ. ೪ ಕಿ.ಮೀ. ರಸ್ತೆ ನಿರ್ಮಾಣವಾಗಬೇಕಾಗಿದ್ದು, ಅದಕ್ಕೆ ರೂ. ೩ ಕೋಟಿ ೧ ಲಕ್ಷ ಅನುದಾನ ಒದಗಿಸಲಾಗಿದೆ. ಒಂದೂವರೆ ಕಿ.ಮೀ. ಅರಣ್ಯ ವ್ಯಾಪ್ತಿ ಇರುವುದರಿಂದ ಅಲ್ಲಿನ ೬೦೦ ಮೀ. ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣಕ್ಕೆ ವಿಶೇಷವಾದ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಪರ್ಯಾ ಯವಾಗಿ ಕಂದಾಯ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೂಟಿಯಾಲ - ಬಿ. ಶೆಟ್ಟಿಗೇರಿ ಸಂಪರ್ಕ ರಸ್ತೆ ನಿರ್ಮಾಣವಾದರೆ ದಕ್ಷಿಣ ಕೊಡಗಿನ ಬಿರುನಾಣಿಯಿಂದ ವೀರಾಜಪೇಟೆ ಮತ್ತು ಜಿಲ್ಲಾ ಕೇಂದ್ರ ಮಡಿಕೇರಿಗೆ ಸಂಪರ್ಕಿಸಲು ಅತಿ ಸಮೀಪವಾಗಲಿದೆ ಎಂದು ಹೇಳಿದರು. ಈ ವಿಚಾರಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ೧೨ ಎಕರೆ ಜಾಗವನ್ನು ಅಭಿವೃದ್ಧಿ ಕಾಮಗಾರಿ ನೀಡಬೇಕಾಗಿದೆ. ಇದರಂತೆ ಅರಣ್ಯ ಕಾಯಿದೆಯಡಿ ಯಲ್ಲಿ ಇಲಾಖೆ ನೀಡುವ ೧೨ ಎಕರೆಗೆ ಸಮನಾಗಿ ೨೪ ಎಕರೆ ನೀಡುವ ನಿಯಮ ಇದೆ. ಆದರೆ, ಮುಕ್ಕೋಡ್ಲು ಗ್ರಾಮದಲ್ಲಿ ಹೆಚ್ಚುವರಿಯಾಗಿ ೪೮ ಎಕರೆ ಕಂದಾಯ ಜಾಗವನ್ನು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ, ಕಾಮಗಾರಿಗೆ ತೊಡಕಾಗಿದ್ದ ಅರಣ್ಯ ಕಾನೂನು ಸಡಿಲಿಕೆಗೊಂಡಿದ್ದು, ಹಲವು ವರ್ಷಗಳ ಜನರ ಬೇಡಿಕೆ ಈಡೇರಲಿದೆ. ಮಳೆಗಾಲ ಮುಗಿದ ನಂತರದಲ್ಲಿ ರಸ್ತೆ ಡಾಂಬರೀಕರಣ ನಡೆಯಲಿದೆ ಎಂದು ತಿಳಿಸಿದರು.
ಶಾಂತೆಯAಡ ರವಿ ಕುಶಾಲಪ್ಪ ಅವರು ಹಲವಾರು ಬಾರಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಶೇಷ ಕಾಳಜಿಯೊಂದಿಗೆ ಜನರ ಮೂಲಭೂತ ಸೌಕರ್ಯಗಳಿಗೆ ಸಮಸ್ಯೆಯಾಗದಂತೆ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿ ದ್ದಾರೆ ಎಂದು ರವಿ ಕುಶಾಲಪ್ಪ ಅವರ ಕಾರ್ಯವನ್ನು
(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಶ್ಲಾಘಿಸಿದರು. ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಶಾಸಕರ ಸಲಹೆ ಮೇರೆಗೆ ಈ ಭಾಗದ ಜನರಿಗೆ ಸೌಕರ್ಯ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಕೂಟಿಯಾಲ ಸೇತುವೆ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಇದ್ದ ತೊಡಕುಗಳನ್ನು ನಿಭಾಯಿಸಲಾಗಿದೆ. ಈ ಭಾಗದಲ್ಲಿ ಸಂಪರ್ಕ ರಸ್ತೆ ನಿರ್ಮಾಣವಾದರೆ ಜನರ ಸಮಯ ಮತ್ತು ಇಂಧನ ಉಳಿತಾಯ ವಾಗುತ್ತದೆ ಮತ್ತು ಕಳೆದ ೨೨ ವರ್ಷಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ವೆಚ್ಚವಾದ ರೂ. ೮೫ ಲಕ್ಷ ಜನಸೇವೆಗೆ ದೊರೆಯಲಿದೆ. ಹೀಗಾಗಿ ಈ ವ್ಯವಸ್ಥೆಗೆ ಕಾನೂನಿನ ಚೌಕಟ್ಟಿನಲ್ಲಿ ಮರುಜೀವ ನೀಡಲಾಗಿದ್ದು, ಶೇ. ೯೦ ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿದೆ. ಮುಂದಿನ ಅಕ್ಟೋಬರ್, ನವೆಂಬರ್ ತಿಂಗಳಿನೊಳಗೆ ಸಂಪರ್ಕ ರಸ್ತೆಯ ಅನುಕೂಲ ಜನರಿಗೆ ಸಿಗುವ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.
ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬುಟ್ಟಿಯಂಡ ಗೀತಾ ತಂಗಮ್ಮ, ಉಪಾಧ್ಯಕ್ಷ ಅಮ್ಮತ್ತೀರ ರಾಜೇಶ್, ಸದಸ್ಯರುಗಳಾದ ಅಣ್ಣಾಳಮಾಡ ರಾಯ್ ಚಿಣ್ಣಪ್ಪ, ಮಲ್ಲಂಗಡ ರೀನಾ ಶಮಿ, ಕಾಳಿ, ಸರಸ್ವತಿ, ಕಾಫಿ ಪ್ರಕೋಷ್ಟ ಅಧ್ಯಕ್ಷ ಕುಪುö್ಪಡೀರ ಪೊನ್ನು ಮುತ್ತಪ್ಪ, ಬಾಡಗರಕೇರಿ ಬೂತ್ ಅಧ್ಯಕ್ಷ ಕಾಯಪಂಡ ಮದು ಮೋಟಯ್ಯ, ಜಿ.ಪಂ. ಇಂಜಿನಿಯರ್ಗಳಾದ ಮಹಾದೇವ್, ಒಬಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧು ದೇವಯ್ಯ ಹಾಜರಿದ್ದರು.