ಮಡಿಕೇರಿ, ಮೇ ೩೧: ಸಿದ್ದಾಪುರದ ಗುಹ್ಯ ಗ್ರಾಮದ ಪುರುಷೋತ್ತಮ ಅವರ ಮನೆಯ ಕೋಳಿ ಗೂಡಿನಲ್ಲಿ ಸೇರಿಕೊಂಡಿದ್ದ ಹಾವನ್ನು ಸ್ನೇಕ್ ಸುರೇಶ್ ರಕ್ಷಿಸಿದ್ದಾರೆ. ಅವರು ಹಾವಿಗೆ ಹುಡುಕಾಟ ನಡೆಸಿದಾಗ ಕೋಳಿ ಗೂಡಿನ ಒಳಗೆ ನಾಗರಹಾವು ಇರುವುದು ಕಂಡು ಬಂದಿತ್ತು. ಈ ಹಾವು ಗೂಡಿನಲ್ಲಿದ್ದ ೮ ಕೋಳಿ ಮರಿಗಳನ್ನು ಹಾಗೂ ಕೋಳಿಯನ್ನು ಕೊಂದು ಹಾಕಿರುವುದು ಗೋಚರಿಸಿದೆ. ಕೋಳಿಯ ಗೂಡಿನೊಳಗಿದ್ದ ೫ ಅಡಿಯ ನಾಗರಹಾವನ್ನು ಸೆರೆಹಿಡಿದು ನಂತರ ಈ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು.