ಕಣಿವೆ, ಮೇ ೩೧: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಪಂಚಾಯಿತಿಯಲ್ಲಿ ಖರೀದಿಸಿ ಇಟ್ಟಿರುವ `ಚಟ್ಟ' ಸಾಮಾನ್ಯ ಸಭೆಯ ಚರ್ಚಾ ವಿಷಯವಾಯಿತು.

ಪಂಚಾಯಿತಿ ವ್ಯಾಪ್ತಿಯ ಜನಸಾಮಾನ್ಯರು ಸಾವಿಗೀಡಾದ ಸಂದರ್ಭದಲ್ಲಿ ಬಳಸುವ ಚಟ್ಟವನ್ನು ಪಂಚಾಯಿತಿಯಿAದ ಪಡೆಯುವವರು ರೂ. ೫೦೦ ಪಾವತಿಸಿ ಒಯ್ಯಬೇಕೆಂಬ ವಿಚಾರ ಸದಸ್ಯರ ನಡುವೆ ಪರ ವಿರೋಧ ಚರ್ಚೆಗೆ ಗ್ರಾಸವಾಯಿತು.

ವ್ಯಕ್ತಿ ಮೃತಪಟ್ಟಾಗ ಸದಸ್ಯರಿಂದ ಪಂಚಾಯಿತಿ ಸಿಬ್ಬಂದಿಗೆ ಫೋನಾಯಿಸಿ ಚಟ್ಟ ಕೊಡಲು ಹೇಳುತ್ತಾರೆ. ಆದರೆ ಅದನ್ನು ಕೊಂಡೊಯ್ಯುವವರು ತಮ್ಮ ಕೆಲಸ ಮುಗಿದ ಬಳಿಕ ಸರಿಯಾಗಿ ಹಿಂತಿರುಗಿಸುವುದಿಲ್ಲ. ಜೊತೆಗೆ ಬೋಲ್ಟು ನೆಟ್ಟುಗಳನ್ನು ಸರಿಯಾಗಿ ನಿರ್ವಹಿಸದೇ ಬೇಕಾಬಿಟ್ಟಿ ತಂದಿಡುತ್ತಾರೆ. ಆದ್ದರಿಂದ ಚಟ್ಟ ಬಳಕೆ ಮಾಡುವ ಸಂದರ್ಭ ವ್ಯಕ್ತಿಗಳಿಂದ ಕನಿಷ್ಟ ರೂ. ೫೦೦ ಠೇವಣಿ ರೂಪದಲ್ಲಿ ತೆಗೆದುಕೊಂಡು ಅದನ್ನು ಹಿಂದಿರುಗಿಸಿದಾಗ ಆ ಹಣವನ್ನು ವಾಪಸ್ ಕೊಡುವಂತೆ ಮಾಡಿ ಎಂದು ಸದಸ್ಯ ಮಣಿ ಮತ್ತು ಆಸಿಫ್ ಹೇಳಿದರು. ಆದರೆ ನೊಂದವರಿAದ ಯಾವುದೇ ಹಣ ತೆಗೆದುಕೊಳ್ಳುವುದು ಬೇಡ ಎಂದು ಹಿರಿಯ ಸದಸ್ಯ ಎಂ.ಎಸ್. ಶಿವಾನಂದ, ಜಿ.ಬಿ. ಜಗದೀಶ್ ಮೊದಲಾದವರು ಹೇಳಿದರು.

ಬಳಿಕ ಸಭಾಧ್ಯಕ್ಷ ಚೆಲುವರಾಜು, ಚಟ್ಟ ಕೊಡುವ ವಿಚಾರದಲ್ಲಿ ಯಾರಿಗೂ ಹಣದ ವಿಷಯದಲ್ಲಿ ಹಟ ಬೇಡ. ಆಯಾಯಾ ವ್ಯಾಪ್ತಿಯ ಸದಸ್ಯರನ್ನೇ ನೇರ ಹೊಣೆ ಮಾಡಿ ಎಂದು ಹೇಳಿದ ನಂತರ ಚಟ್ಟದ ಚರ್ಚೆ ಕೊನೆಗೊಂಡಿತು.

ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹಲವು ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳು ಅಪಾಯದಲ್ಲಿವೆ. ಇದೀಗ ಮಳೆಗಾಲ ಆರಂಭವಾಗುವುದರಿAದ ಗಾಳಿ ಮಳೆಗೆ ಅಪಾಯ ಅವಘಡಗಳು ಸಂಭವಿಸುವ ಮುನ್ನಾ ಚೆಸ್ಕಾಂ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುಬೇಕೆಂದು ಸದಸ್ಯ ಮಣಿ ಸಭೆಯಲ್ಲಿ ಒತ್ತಾಯಿಸಿದರು.

ಕುಶಾಲನಗರ ನಾಡಕಚೇರಿಯಲ್ಲಿ ಕೆಲವು ಸಿಬ್ಬಂದಿಗಳು ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡುತ್ತಿಲ್ಲ. ಹಳ್ಳಿಯ ಅಮಾಯಕ ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಹಿರಿಯ ಸದಸ್ಯ ಎಂ.ಎಸ್. ಶಿವಾನಂದ ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಕೈಪಂಪುಗಳ ದುರಸ್ತಿಗೆ ೨೦ ಸಾವಿರ ಹಣ ಖರ್ಚು ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಚಿತ್ರಕಲಾ, ಪಂಚಾಯಿತಿಯಲ್ಲಿ ಎಷ್ಟು ಕೈಪಂಪುಗಳಿವೆ. ಎಷ್ಟು ಜನ ಬಳಕೆಯಲ್ಲಿವೆ. ಏಕೆ ಅನಗತ್ಯವಾಗಿ ಜನರ ತೆರಿಗೆ ಹಣ ಅಪವ್ಯಯ ಮಾಡುತ್ತಿದ್ದೀರ ಎಂದು ಕಿಡಿಕಾರಿದರು. ಗೊಂದಿಬಸವನಹಳ್ಳಿ ಗ್ರಾಮದಲ್ಲಿ ದುರಸ್ತಿಗೊಂಡಿದ್ದ ವಿದ್ಯುತ್ ಕಂಬದ ಟ್ರಾನ್ಸ್ಫಾರ್ಮರ್ ಪೆಟ್ಟಿಗೆ ಸ್ಥಳಾಂತರಕ್ಕೆ ಚೆಸ್ಕಾಂಗೆ ೭೫ ಸಾವಿರ ಪಾವತಿಸಿರುವ ಬಗ್ಗೆ ಸದಸ್ಯ ಶಿವಾನಂದ ಆಕ್ಷೇಪ ವ್ಯಕ್ತಪಡಿಸಿದರು.

ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಪಿಡಿಓ ಸುಮೇಶ್, ಸದಸ್ಯರಾದ ಗಣೇಶ, ಸಂತೋಷ್ ಕುಮಾರ್, ಮುರುಳೀಧರ್, ಆಸಿಫ್, ವೇದಾವತಿ, ಜಯಲಕ್ಷಿö್ಮ, ಕಾಂಚನಾ, ಜ್ಯೋತಿ, ಹರಿಣಿ, ಪ್ರಭಾಕರ್, ಕಾಂಚನಾ, ಪಾರ್ವತಿ ಮೊದಲಾದವರಿದ್ದರು.