ಮಡಿಕೇರಿ, ಮೇ ೩೦ : ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಗದ್ದಿಗೆ ಹಾಗೂ ಗಾಳಿಬೀಡು ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ತಾ. ೩೧ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಸಂಪಿಗೆಕಟ್ಟೆ, ಮುತ್ತಪ್ಪ ದೇವಸ್ಥಾನ, ಕಾನ್ವೆಂಟ್ ಜಂಕ್ಷನ್, ಭಗವತಿನಗರ, ಮಾರುಕಟ್ಟೆ, ರಾಣಿಪೇಟೆ, ಹೆಬ್ಬೆಟ್ಟಗೇರಿ, ಕಾಲೂರು, ಗಾಳಿಬೀಡು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.