ಮಡಿಕೇರಿ, ಮೇ ೩೧ : ಭಾರತೀಯ ಭಾಷೆಗಳ ಮೇಲೆ ಅಪಾರ ಅಭಿಮಾನ ತೋರಿರುವ ಪ್ರಧಾನಿ ನರೇಂದ್ರಮೋದಿ ಅವರು, ಎಲ್ಲಾ ಭಾಷೆಗಳನ್ನು ಉಳಿಸುವುದು ಎಲ್ಲರ ಕರ್ತವ್ಯ ಎಂದು ಕರೆ ನೀಡಿರುವುದು ಶ್ಲಾಘನೀಯ ಮತ್ತು ಸ್ವಾಗತಾರ್ಹ. ಪ್ರಧಾನಿ ಆಶಯ ಅಧಿಕೃತವಾಗಿ ಕಾರ್ಯಗತವಾದರೆ ಕೊಡವ ಭಾಷೆಗೆ ೮ ನೇ ಶೆಡ್ಯೂಲ್‌ನಡಿ ಸ್ಥಾನ ದೊರೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟಿçÃಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಮಂತ್ರಿಗಳು ದೇಶದ ವೈವಿಧ್ಯಮಯ ಭಾಷೆಗಳ ಮಹತ್ವಕ್ಕೆ ಸಂಬAಧಿಸಿದAತೆ ಉತ್ತಮ ಮಾತುಗಳನ್ನಾಡಿದ್ದಾರೆ. ಈ ಮಾತುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಶೀಘ್ರ ಕೊಡವ ಭಾಷೆಯನ್ನು ೮ ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಭಾರತ ಅಸಂಖ್ಯಾತ ಭಾಷೆಗಳು, ಜನಾಂಗೀಯ ಗುಂಪುಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯ ಆಶ್ರಯವಾಗಿದೆ. ಸಾಂವಿಧಾನಿಕ ಸಹಭಾಗಿತ್ವದ ಪ್ರಾತಿನಿಧಿಕ ಪ್ರಜಾಪ್ರಭುತ್ವದಡಿಯಲ್ಲಿ ಎಲ್ಲರೂ ಸಮಾನರು ಎನ್ನುವ ಪೋಷಣೆಯೊಂದಿಗೆ ಜೀವನ ಸಾಗಿಸಿದರೆ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬಹುದಾಗಿದೆ. ಆದ್ದರಿಂದ ಪ್ರಧಾನಮಂತ್ರಿಗಳ ಬದ್ಧತೆಯನ್ನು ಗಾಳಿಯಲ್ಲಿ ವ್ಯರ್ಥ ಮಾಡಬಾರದು ಮತ್ತು ಮತ ಭಿಕ್ಷೆಗಾಗಿ ದುರುಪಯೋಗಪಡಿಸಿಕೊಳ್ಳಬಾರದು. ಬದಲಿಗೆ ಲಿಖಿತ ರೂಪದಲ್ಲಿ ಜಾರಿಗೆ ತರಬೇಕೆಂದು ನಾಚಪ್ಪ ಆಗ್ರಹಿಸಿದ್ದಾರೆ.
ನಮ್ಮ ದೇಶದ ಏಕತೆ ಮತ್ತು ಅದರ ಸಾರ್ವಭೌಮತ್ವದ ಮುಂದುವರಿಕೆಗಾಗಿ ಕೊಡವ ಭಾಷೆಯನ್ನು ಕೂಡ ಎಲ್ಲಾ ಭಾಷೆಗಳಂತೆ ಪೂಜ್ಯ ಎಂದು ಪರಿಗಣಿಸಬೇಕು. ಆ ಮೂಲಕ ೮ ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.