ಸೋಮವಾರಪೇಟೆ, ಮೇ ೩೦: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೆಗ್ಗುಳ ವಾರ್ಡ್ನ ಬಿಜೆಪಿ ಬೆಂಬಲಿತ ಸದಸ್ಯೆ ಜಿ.ಜಿ.ಮಲ್ಲಿಕಾ ಹಾಗು ಉಪಾಧ್ಯಕ್ಷರಾಗಿ ಗೌಡಳ್ಳಿ ವಾರ್ಡ್ನ ಜಿ.ಜಿ.ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಅ) ಗೆ ಮೀಸಲಾಗಿತ್ತು.
ಅಧ್ಯಕ್ಷರಾದ ಕೆ.ಕೆ.ಕುಸುಮ, ಉಪಾಧ್ಯಕ್ಷರಾದ ಕೆ.ಎಂ.ರೋಹಿಣಿ ಈ ಹಿಂದೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾಧಿಕಾರಿ ಯಾದವ್‌ಬಾಬು ಅವರ ಸಮ್ಮುಖದಲ್ಲಿ ಚುನಾವಣೆ ನಡೆಯಿತು.
ಈ ಸಂದರ್ಭ ಸದಸ್ಯರಾದ ನವೀನ್ ಅಜ್ಜಳ್ಳಿ, ಜಿ.ಎಸ್.ನಾಗರಾಜು, ಬಿ.ಎಚ್.ಮಂಜುನಾಥ, ಸಿ.ಈ.ವೆಂಕಟೇಶ್, ಕೆ.ಕೆ.ಸುಮಾ, ಕೆ.ಎಂ.ರೋಹಿಣಿ, ಕೆ.ಡಿ.ವಿಶಾಲಾಕ್ಷಿ, ಗೌರಿ, ಪಿಡಿಒ ಲಿಖಿತಾ ಇದ್ದರು.