ಮಡಿಕೇರಿ, ಮೇ ೩೦: ಜಿಲ್ಲೆಯ ಪ್ರವಾಸಿ ಆಕರ್ಷಿತ ಜಲಪಾತಗಳೆಂದು ಪ್ರಸಿದ್ಧತೆ ಪಡೆದಿರುವ ಕೆ.ನಿಡುಗಣೆಯ ಅಬ್ಬಿ ಜಲಪಾತವಿರಲಿ, ಸೋಮವಾರಪೇಟೆಯ ಮಲ್ಲಳ್ಳಿ ಇರಲಿ, ದಕ್ಷಿಣ ಕೊಡಗಿನ ಇರ್ಪುವಿರಲಿ, ಎಲ್ಲವೂ ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆಯ ನಿರ್ವಹಣೆಯೊಂದಿಗೆ ಭದ್ರತೆಯನ್ನು ಒದಗಿಸುತ್ತವೆೆ. ಇವೆಲ್ಲಾ ಜಲಪಾತಗಳು ಹಲವಾರು ವರ್ಷಗಳಿಂದ ಹೊರಜಿಲ್ಲೆ, ಹೊರರಾಜ್ಯ ಹಾಗೂ ಹೊರರಾಷ್ಟçಗಳ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಜಲಪಾತಗಳ ಸಮೀಪ ಪ್ರವಾಸಿಗರ ಭದ್ರತೆಗಾಗಿ ಸ್ಥಳೀಯ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸಂಭವಿಸಬಹುದಾದAತಹ ದುರಂತಗಳನ್ನು ತಪ್ಪಿಸುವ ಪ್ರಯತ್ನ ಕೂಡ ಆಗುತ್ತಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಇನ್ನಷು ಜಲಪಾತಗಳು ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಪಡೆಯುತ್ತಾ ಬಹಳಷ್ಟು ಪ್ರವಾಸಿಗರನ್ನು ಕೈ ಬೀಸಿ ತಮ್ಮತ್ತ ಕರೆಯುತ್ತಿವೆ. ಇವುಗಳ ಪಟ್ಟಿಯಲ್ಲಿ ಮುಕ್ಕೋಡ್ಲು ಸಮೀಪದ ಕೋಟೆ ಅಬ್ಬಿ ಜಲಪಾತವೂ ಒಂದಾಗಿದೆ.

ಹಚ್ಚ ಹಸಿರು ಪರಿಸರದ ನಡುವೆ ಅಡಗಿದ್ದ ಕೋಟೆ ಅಬ್ಬಿ ಜಲಪಾತಕ್ಕೆ ಇದೀಗ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಆದರೆ ಇಲ್ಲಿ ಹೇಳುವವರು-ಕೇಳುವವರು ಯಾರೂ ಇಲ್ಲದೆ ಅಪಾಯದ ಬಗ್ಗೆ ಅರಿವಿಲ್ಲದ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿದರೆ ಸಾವು-ನೋವು ಸಂಭವಿಸುವುದು ಖಚಿತ. ಇದಕ್ಕೆ ನಿನ್ನೆ ನಡೆದ ದಾರುಣ ಘಟನೆ ಸಾಕ್ಷಿ. ದುರಾದೃಷ್ಟವಶಾತ್ ೩ ಮಂದಿ ಜಲಸಮಾಧಿಯಾಗಿದ್ದು, ಮೃತದೇಹಗಳನ್ನು ಕಳೆದ ರಾತ್ರಿ ಮರಣೋತ್ತರ ಪರೀಕ್ಷೆ ಬಳಿಕ ಸಂಬAಧಿಕರು ತವರಿಗೆ ಕೊಂಡೊಯ್ದಿದ್ದಾರೆ.

(ಮೊದಲ ಪುಟದಿಂದ) ಬಳಿಕ ಇಂದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಜಲಪಾತದಲ್ಲಿನ ಅಭದ್ರತೆ ಗೋಚರಿಸಿದೆ.

ಮಕ್ಕಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಜಲಪಾತದಲ್ಲಿ, ಜಲಪಾತವು ಖ್ಯಾತಿ ಪಡೆಯುತ್ತಾ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಪಂಚಾಯಿತಿ ವತಿಯಿಂದ ಭದ್ರತಾ ಕ್ರಮವಾಗಿ ೫ ವರ್ಷಗಳ ಹಿಂದಿನಿAದ ಭದ್ರತಾ ಸಿಬ್ಬಂದಿಯೋರ್ವರನ್ನು ನೇಮಿಸಲಾಗಿತ್ತು. ಇವರು ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಾರೆ ಎಂಬುದಾಗಿ ಆಕ್ಷೇಪಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಲವರಿಂದಾಗಿ ಪಂಚಾಯಿತಿ ಆ ಸಿಬ್ಬಂದಿಯನ್ನು ತೆರವುಗೊಳಿಸ ಬೇಕಾಯಿತು. ಈ ಸಿಬ್ಬಂದಿ ಛಾಯಾ ಗ್ರಾಹಕರಿಗೆ ಹೆಚ್ಚಿನ ಶುಲ್ಕವನ್ನು ಸಂಗ್ರಹಿಸುತ್ತಿದ್ದ ಬಗ್ಗೆಯೂ ಹಲವಾರು ಮಂದಿ ಆಕ್ಷೇಪಿಸಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಯದೆÉ ಜಲಪಾತದ ಸಮೀಪ ಹಣ ಸಂಗ್ರಹ ಮಾಡುವುದು ಕಾನೂನಿಗೆ ವಿರುದ್ಧ ವಾದುದು ಎಂಬ ಕಾರಣದಿಂದಾಗಿ ಈ ಸಿಬ್ಬಂದಿಯನ್ನು ತೆರವು ಮಾಡಲಾಯಿತು. ಇದೀಗ ಈ ಜಲಪಾತವು ಮತ್ತೇ ಅಭದ್ರತೆಯಿಂದ ಕೂಡಿದೆ. ನೀರಿಗೆ ಇಳಿಯಬೇಡಿ ಎಂಬ ಸಂದೇಶದ ಸೂಚನಾ ಫಲಕವು ಜಲಪಾತದಿಂದ ದೂರವಿದ್ದು, ಬಹಳಷ್ಟು ಪ್ರವಾಸಿಗರು ಇದನ್ನು ನೋಡದೆ ನೀರಿಗೆ ಇಳಿಯುತ್ತಾರೆ. ಈ ಸಂದರ್ಭ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು.