ವೀರಾಜಪೇಟೆ, ಮೇ ೨೮: ಜಾತ್ಯತೀತ ಜನತಾದಳ ವೀರಾಜ ಪೇಟೆ ನಗರ ಘಟಕದ ವತಿಯಿಂದ ನಗರದ ಗೋಣಿಕೊಪ್ಪಲು ರಸ್ತೆಯ ಪಕ್ಷದ ಕಚೇರಿಯಲ್ಲಿ ನಡೆದ ವಿವಿಧ ಘಟಕಗಳ ಅಧ್ಯಕ್ಷರುಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಎಸ್. ಮತೀನ್ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ರಾಷ್ಟಿçÃಯ ಪಕ್ಷಗಳು ಆಳ್ವಿಕೆಯನ್ನು ಮಾಡುತ್ತಿವೆ. ಆದರೂ ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿಯಿಂದ ರಾಜ್ಯದ ಜನತೆಯು ಬೇಸತ್ತಿದೆ. ಆದುದರಿಂದ ಪ್ರಾದೇಶಿಕ ಪಕ್ಷವು ಅಧಿಕಾರಕ್ಕೆ ಬರುವ ಅನಿವಾರ್ಯತೆ ಜನತೆಯ ಮನದಲ್ಲಿದೆ. ಈ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಇಂದು ವಿವಿಧ ಸಮಿತಿಗಳಿಗೆ ಅಧ್ಯಕ್ಷರ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ನಗರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ಜಾತಿ ಧರ್ಮ, ಜನಾಂಗ ದವರನ್ನು ಬದಿಗೊತ್ತಿ ಎಲ್ಲರು ಸಮಾನರು ಎಂಬ ದೃಷ್ಟಿಯಿಂದ ಜಾತ್ಯಾತೀತ ಪರಿಕಲ್ಪನೆಯ ಆಧಾರದ ಮೇಲೆ ಪಕ್ಷದ ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆ ಮಾಡಲಾಗಿರುವ ಪಕ್ಷದ ಸದಸ್ಯರಿಗೆ ಅಧಿಕಾರವನ್ನು ನೀಡಲಾಗಿದೆ ಎಂದರು.

ನಗರ ಅಧ್ಯಕ್ಷ ಟಿ.ಎಂ. ಯೊಗೇಶ್ ನಾಯ್ಡು ಮಾತನಾಡಿ ಪಕ್ಷದಲ್ಲಿ ಧರ್ಮ ಭೇದ ಮರೆತು ಜಾತ್ಯತೀತ ಜನತಾ ದಳ ಪಕ್ಷದ ತತ್ವ ಸಿದ್ದಾಂತ ನಿಲುವಿನ ಮೇಲೆ ಇಂದು ವಿವಿಧ ಸಂWಗಳÀ ರಚನೆ ಮಾಡಿದ್ದು, ಸಮಿತಿಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ನಗರ ಯುವ ಘಟಕದ ಅಧ್ಯಕ್ಷರಾಗಿ ಹೆಚ್.ಆರ್. ಕಿಶೋರ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಪಿ.ವೈ. ಷಂಶುದ್ದೀನ್, ನಗರದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ.ಹೆಚ್. ಆಶೀಖ್, ನಗರ ಮಹಿಳಾ ಘಟಕದ ಅಧ್ಯಕ್ಷರಾಗಿ ಜುಬೈದಾ ನಬುವತ್ ಅವರುಗಳಿಗೆ ಪಕ್ಷದ ವತಿಯಿಂದ ಆಯ್ಕೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಪಾಣತ್ತಲೆ ಸತ್ಯ, ತಾಲೂಕು ಯುವ ಘಟಕದ ಅಧ್ಯಕ್ಷ ಸರ್ಪುದ್ದೀನ್ ಅವರುಗಳು ಹಾಜರಿದ್ದರು.