ಮಡಿಕೇರಿ, ಮೇ ೨೮: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಮ್ಯಾಥ್ಯು ಅವರನ್ನು ಮರು ಆಯ್ಕೆ ಮಾಡಲಾಯಿತು.
ಪ್ರಾಂಶುಪಾಲ ಚೌರೀರ ಜಗತ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ಕಾಲೇಜಿನಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಶ್ವಿನಿ ಜೆ.ಎ., ಕಾರ್ಯದರ್ಶಿಯಾಗಿ ಡಾ. ಮಹದೇವಯ್ಯ, ಖಜಾಂಚಿಯಾಗಿ ಡಾ. ಜೆ.ಜೆ. ಮಂಜುನಾಥ ಅವರನ್ನು ಮರುನೇಮಕ ಮಾಡಲಾಯಿತು. ಉಪಕಾರ್ಯದರ್ಶಿಯಾಗಿ ಆನಂದ್ ಬಿ.ಎ. ಅವರನ್ನು ಆಯ್ಕೆ ಮಾಡಲಾಯಿತು.
ಪೋಷಕ ಶಿಕ್ಷಕ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮ್ಯಾಥ್ಯು, ವಿದ್ಯಾರ್ಥಿಗಳನ್ನು ಅತ್ಯುತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಪೋಷಕರು ಶಿಕ್ಷಕರ ಸಹಭಾಗಿತ್ವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಕಾಲೇಜಿನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಿಕ್ಷಕರಾಗಿ ಡಾ. ಲಕ್ಷಿö್ಮದೇವಿ, ತಳವಾರ, ಡಾ. ವಿಜಯಲತಾ, ಡಾ. ಕರುಣಾಕರ, ರವಿಶಂಕರ್, ಡಾ. ನಯನಾ ಕಶ್ಯಪ್, ಇಳಯರಾಜ, ಸ್ವಸ್ತಿಕಾ, ನಿಸರ್ಗ, ಶಶಿಕಲಾ ಹಾಗೂ ಪೋಷಕ ಸದಸ್ಯರಾಗಿ ಶಾಹಿದಾ, ಮಿಶ್ರಿಯ, ಅನಿತಾ ಕುಯ್ಯಮುಡಿ, ಲತಾ, ಜನಾರ್ಧನ, ಡೈಸಿ, ದೇವಕಿ, ಉಷಾರಾಣಿ, ಜಾನ್ಸಿ ಅವರನ್ನು ಆಯ್ಕೆ ಮಾಡಲಾಯಿತು.