ವೀರಾಜಪೇಟೆ, ಮೇ ೨೮: ಕಾಕೋಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಪುರುಷ ಹಾಗೂ ಮಹಿಳೆಯರಿಗೆ ಮೇ ೨೬ ರಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಿಂದೂ ಕಪ್ ಶೆಟಲ್‌ನ ಫೈನಲ್ ಪಂದ್ಯಾಟ ತಾ.೨೯ರಂದು (ಇಂದು) ಸಂಜೆ ೬ ಗಂಟೆಗೆ ಕಾಕೋಟೊಪರಂಬು ಸ್ಪೋಟ್ಸ್ ಕ್ಲಬಿನಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಅಧ್ಯಕ್ಷ ಮೇವಡ ಚಿಣ್ಣಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೨೦೦೮ ರಲ್ಲಿ ಪ್ರಾರಂಭಗೊAಡ ಕ್ಲಬ್ ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ೨೦೧೩ರಿಂದ ೨೦೧೯ ರವರೆಗೆ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇದೆ. ಯುವ ಪೀಳಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ೩೦ ಲಕ್ಷ ವೆಚ್ಚದಲ್ಲಿ ವುಡನ್ ಶೆಟಲ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಶೆಟಲ್ ಪಂದ್ಯಾಟವನ್ನು ಪುರುಷ ಕ್ರೀಡಾಪಟುಗಳ ವಯೋಮಿತಿಯ ಆಧಾರದ ಮೇಲೆ ಆಯೋಜಿಸಲಾಗಿದೆ. ಆಟಗಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತಾ. ೨೯ರಂದು (ಇಂದು) ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸಮಾರೋಪ ಸಮಾರಂಭ ಫೈನಲ್ ಪಂದ್ಯಾಟದ ನಂತರ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸ್ಪೋಟ್ಸ್ ಕ್ಲಬ್‌ನ ಅದ್ಯಕ್ಷ ಮೇವಡ ಚಿಣ್ಣಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಬಿ.ಜೆ.ಪಿ ಕಾಂiÀiðಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಉಪಸ್ಥಿತಲಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ದೇ±ಕ ಮೇವಡ ಅಯ್ಯಣ್ಣ, ಐಚೆಟ್ಟಿರ ಚಂಗಪ್ಪ ಉಪಸ್ಥಿತರಿದ್ದರು.