ವೀರಾಜಪೇಟೆ, ಮೇ ೨೮: ಒಕ್ಕಲಿಗರ ಸಂಘದ ವತಿಯಿಂದ ಕ್ರೀಡಾಕೂಟ ಅಮ್ಮತ್ತಿ ಒಂಟಿಯAಗಡಿ ಶಾಲಾ ಮ್ಯೆದಾನದಲ್ಲಿ ಮೇ ೨೯ ರಂದು ನಡೆಸಲಾಗುವುದು ಎಂದು ಸಂಘದ ನಿರ್ದೇಶಕ ಕೆ.ಪಿ ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಕ್ಕಲಿಗರ ಸಂಘ ಪ್ರಾರಂಭಗೊAಡು ಆರು ವರ್ಷಗಳಾಗಿದ್ದು, ೩೫೦ ಸದಸ್ಯರನ್ನು ಒಳಗೊಂಡಿದೆ. ಕ್ರೀಡಾಕೂಟಗಳನ್ನು ನಡೆಸುವುದರ ಮೂಲಕ ಜನಾಂಗದ ಒಗ್ಗೂಡಿಕೆ ಸಾಧ್ಯವಾಗುತ್ತದೆ. ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಪುರುಷರಿಗೆ ನೂರು ಮೀಟರ್ ಓಟ, ಗೋಣಿಚೀಲ ಜಿಗಿತ, ಮಹಿಳೆಯರಿಗೆ ಸಂಗೀತ ಕುರ್ಚಿ ಹಾಗೂ ವಿಷದ ಚೆಂಡು ಸ್ಪರ್ಧೆ, ಬಾಲಕ ಬಾಲಕಿಯರಿಗೆ ಹಾಗೂ ಪುಟ್ಟ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.
ನಿರ್ದೇಶಕ ವಿ.ಎಲ್ ಆನಂದ್ ಮಾತನಾಡಿ ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರವೀಂದ್ರ ಹರಪಳ್ಳಿ, ಜಿಲ್ಲಾಧ್ಯಕ್ಷ ಎಸ್.ಎಂ ಚಂಗಪ್ಪ ಆಗಮಿಸಲಿದ್ದಾರೆ. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೆ ದೇವಲಿಂಗಯ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ೩ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು ಸನ್ಮಾನಿಸ ಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯ ವಿ.ಪಿ ಜೀವನ್ ಉಪಸ್ಥಿತರಿದ್ದರು.