ಮಡಿಕೇರಿ, ಮೇ ೨೮: ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿನ ಕೊಡವ ಸಮಾಜದ ಮುಂದಿನ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ಖಚಿತವಾಗಿದೆ. ಈಗಾಗಲೇ ಸಮಾಜಕ್ಕೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಜೂನ್ ೫ಕ್ಕೆ ಮತದಾನ ನಿಗದಿಯಾಗಿದೆ.

ನಾಮಪತ್ರ ಹಿಂಪಡೆಯಲು ನಿನ್ನೆ ಅಂತಿಮ ದಿನವಾಗಿತ್ತಾದರೂ ಇದೀಗ ಎಲ್ಲಾ ಸ್ಥಾನಗಳಿಗೆ ಒಂದಕ್ಕಿAತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮಂಡುವAಡ ಪಿ. ಮುತ್ತಪ್ಪ, ಪೊರಿಮಂಡ ದಿನಮಣಿ ಪೂವಯ್ಯ ಹಾಗೂ ಮಂಡೀರ ಎ. ಪೂಣಚ್ಚ ಸೇರಿ ಮೂವರು ಸ್ಪರ್ಧೆಯಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೂ ನಂದಿನೆರವAಡ ಪಿ. ಚೀಯಣ್ಣ ಹಾಗೂ ಸಿದ್ದಂಡ ಕೆ. ನಂಜಪ್ಪ ಕಣದಲ್ಲಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೂ ಮೂವರು ಸ್ಪರ್ಧಿಸಿದ್ದಾರೆ. ಕನ್ನಂಡ ಎ. ಸಂಪತ್, ಕಾವೇರಿಯಪ್ಪ ಪ್ರಕಾಶ್ ನಾಟೋಳಂಡ ಹಾಗೂ ಬೊಪ್ಪಂಡ ಕೆ. ಪೂಣಚ್ಚ ಅಭ್ಯರ್ಥಿಗಳಾಗಿದ್ದಾರೆ.

ಜಂಟಿ ಕಾರ್ಯದರ್ಶಿ (ಖಜಾಂಚಿ) ಸ್ಥಾನಕ್ಕೂ ನಂದಿನೆರವAಡ ದಿನೇಶ್ ಹಾಗೂ ಸುರೇಶ್ ಮುತ್ತಪ್ಪ ಚಂಬAಡ ಸ್ಪರ್ಧಿಸಿದ್ದಾರೆ.

ಒಟ್ಟು ೮ ನಿರ್ದೇಶಕ ಸ್ಥಾನಕ್ಕೆ ೧೪ ಮಂದಿ ಕಣದಲ್ಲಿದ್ದಾರೆ. ಮುಂಡAಡ ಎ. ಸುಬ್ಬಪ್ಪ, ಪುತ್ತರೀರ ಪಿ. ಕಾಳಯ್ಯ, ಮಾದೇಟಿರ ಪಿ. ತಿಮ್ಮಯ್ಯ, ನಂದಿನೆರವAಡ ರವಿ ಬಸಪ್ಪ, ಮಂಡುವAಡ ಬಿ. ಜೋಯಪ್ಪ, ಕುಪ್ಪಂಡ ವಸಂತ್, ಕೇಕಡ ಎ. ದೇವಯ್ಯ, ಕಾಳಚಂಡ ಎಂ. ಅಪ್ಪಣ್ಣ, ಮಂಡೀರ ಡಿ. ಮುದ್ದಪ್ಪ, ಮೂವೆರ ಕೆ. ಜಯರಾಮ್, ಸಂಜು ಚೊಟ್ಟೆಯಂಡ, ತಾತಪಂಡ ಉತ್ತಪ್ಪ, ನಾಪಂಡ ಎಸ್. ಬಿದ್ದಪ್ಪ, ಶಾಂತೆಯAಡ ವಿಶಾಲ್ ಕಾರ್ಯಪ್ಪ ಅಭ್ಯರ್ಥಿಗಳಾಗಿದ್ದಾರೆ.

ಮೂವರು ಮಹಿಳಾ ನಿರ್ದೇಶಕರ ಸ್ಥಾನಕ್ಕೂ ಐದು ಮಂದಿ ಸ್ಪರ್ಧೆಯಲ್ಲಿದ್ದಾರೆ. ಕಾಂಡೇರ ಲಲ್ಲು ಕುಟ್ಟಪ್ಪ, ಪಳಂಗAಡ ರೇಖಾ ತಿಮ್ಮಯ್ಯ, ರೂಪಾ ಸುಬ್ಬಯ್ಯ, ಪಾಲೆಯಂಡ ಬೊಪ್ಪಂಡ ಸರಳ ಕರುಂಬಯ್ಯ (ತಾರ), ಕನ್ನಂಡ ಕವಿತಾ ಕಾವೇರಮ್ಮ ಬಿ. ಕಣದಲ್ಲಿದ್ದಾರೆ.

ಸಮಾಜದಲ್ಲಿ ಒಟ್ಟು ೩೧೯೬ ಸದಸ್ಯರಿದ್ದು, ಇವರ ಪೈಕಿ ೩,೧೫೮ ಮಂದಿ ಅರ್ಹ ಮತದಾರರಾಗಿದ್ದಾರೆ. ಜೂನ್ ೫ ರಂದು ಮತದಾನ ನಡೆಯಲಿದ್ದು, ಚುನಾವಣಾಧಿಕಾರಿಯಾಗಿ ಚೆಕ್ಕೇರ ಎಂ. ಪ್ರಮೋದ್ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಾಸಭೆ : ಸಮಾಜದ ಮಹಾಸಭೆಯೂ ಜೂನ್ ೫ ರಂದು ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.