ಮೇ ೨೮: ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಒದಗಿಸಿರುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿಯಲ್ಲಿ ಸರಕಾರದ ಮಹತ್ವದ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ೨೩೮ ನಿವಾಸಿಗಳಿಗೆ ಬೋರ್ವೆಲ್ ಮತ್ತು ಕುಡಿಯುವ ನೀರಿನ ಟ್ಯಾಂಕ್ ರೂ, ೪೯,೦೫ ಲಕ್ಷ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ರೂ,೩೦ ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ೧೯೯ ಕುಟುಂಬಗಳಿಗೆ ರೂ, ೭೧,೨೮ ಲಕ್ಷ ಹಾಗೂ ಕೆದಮುಳ್ಳೂರು ಗ್ರಾಮದ ೧೦೯೪ ಮನೆಗೆ ಪೈಪ್ ಲೈನ್ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ರೂ,೨೬೯,೧೮ ಲಕ್ಷ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದÀ ಶಶಿ ಸುಬ್ರಮಣಿ, ಮಹೇಶ್ ಗಣಪತಿ, ಬಿಜೆಪಿಯ ಪ್ರಮುಖರಾದ ರಘು
ನಾಣಯ್ಯ, ನೆಲ್ಲೀರ ಚಲನ್ ಕುಮಾರ್, ಲಾಲಾ ಭೀಮಯ್ಯ, ಅಂಜಪರವAಡ ಅನಿಲ್, ಕುಂಬೆಯAಡ ಗಣೇಶ್, ರಾಜ ನಂಜಪ್ಪ, ಮನುಕುಮಾರ್, ಕದನೂರು ಗ್ರಾಮ ಪಂಚಾಯಿತಿ ಪಿಡಿಓ ಮಂಜುಳಾ, ಮತ್ತು ಸದಸ್ಯರು, ಜಿ.ಪಂ. ಅಭಿಯಂತರ ಮಹದೇವ, ಯೋಗೇಶ್ ಗೌಡ, ಸುನಿಲ್ ಕುಮಾರ್ ಹಾಗೂ ಕೆದಮುಳ್ಳೂರು ಮತ್ತು ಪಾಲಂಗಾಲ ಗ್ರಾಮದಲ್ಲಿ ಭೂಮಿ ಪೂಜೆ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ಮೇದಪ್ಪ, ಸದಸ್ಯರಾದ ಪರಮೇಶ್ವರ, ಸಾಬಾಮುತ್ತಪ್ಪ, ವೀಣಾವಿಮಲಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.