ಸೋಮವಾರಪೇಟೆ, ಮೇ ೨೮: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಇಲ್ಲಿನ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿನಿ ಸಿಂಚನಾಳನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕ್ಲಬ್‌ನ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಕಾರ್ಯದರ್ಶಿ ಜಿ.ಎಸ್. ರಾಜಾರಾಮ್, ಖಜಾಂಚಿ ಸಿ.ಕೆ. ರಾಜೀವ್ ಸೇರಿದಂತೆ ನಿರ್ದೇಶಕರುಗಳು, ವಿದ್ಯಾರ್ಥಿನಿಯ ಪೋಷಕರಾದ ಪಿ.ಜಿ. ಬಾಬುರಾಯ, ಶುಭ ಅವರುಗಳು ಉಪಸ್ಥಿತರಿದ್ದರು.