ನಾಪೋಕ್ಲು, ಮೇ ೨೮: ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿಯ ಕೊಡಗು ಜಿಲ್ಲೆಯ ಜನತೆ ಹಲವಾರು ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಒಗ್ಗಟ್ಟಿನಿಂದ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಹೇಳಿದರು. ಸಮೀಪದ ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಕೊಳಕೇರಿ ಸ. ಶಾಲÁ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಜ್ರಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ, ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕಲಿಯಂಡ ಡಾಲು ಕಾಳಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಊರಿನ ದಾನಿಗಳ ನೆರವಿನಿಂದ ಗ್ರಾಮವು ಅಭಿವೃದ್ಧಿಯ ಪಥದತ್ತ ಸಾಗಿದೆ. ಯುವಜನತೆ ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.

ಲೇಖಕಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ ವಿವೇಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಜಿಲ್ಲೆಯ ಜನಾಂಗದ ಸಂಸ್ಕೃತಿ ಪದ್ಧತಿ ಪರಂಪರೆಗಳನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.

ಚೀಫ್ ಎಲೆಕ್ಟಿçಕಲ್ ಇಂಜಿನಿಯರ್, ದಾನಿ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ನಾಪೋಕ್ಲು, ಕಕ್ಕಬ್ಬೆ ವ್ಯಾಪ್ತಿಯಲ್ಲಿ ಎರಡು ಎಕರೆ ಸ್ಥಳ ದೊರೆತಲ್ಲಿ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.

ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಕುಂಡ್ಯೊಳAಡ ರಮೇಶ್‌ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಾನಿಗಳ ಹಾಗೂ ಗ್ರಾಮಸ್ಥರ ಸಹಕಾರದಿಂದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿದೆ ಎಂದು ನುಡಿದರು.

ವೇದಿಕೆಯಲ್ಲಿ ಕುಂಡ್ಯೋಳAಡ ಸುಬ್ಬಯ್ಯ, ಕೇಟೋಳಿರ ಎಸ್.ಕುಟ್ಟಪ್ಪ, ಬೊಟ್ಟೋಳಂಡ ಡಾಲುಸೋಮಯ್ಯ, ಅಪ್ಪಚ್ಚೀರ ಸುರೇಶ್‌ಬೆಳ್ಯಪ್ಪ, ಕನ್ನಂಬೀರ ಚೆಂಗಪ್ಪ, ಕಾಂಡAಡ ಸುಬ್ಬಯ್ಯ, ಕುಂಬಾರರ ಶಂಕರ, ಉಪಸ್ಥಿತರಿದ್ದರು.

ಮೊದಲಿಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ದುಡಿಕೊಟ್ಟು ಪಾಟಿನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಕನ್ನಂಬೀರ ನಿಧಿತಿಮ್ಮಯ್ಯ ಪ್ರಾರ್ಥಿಸಿ ಕುಂಡ್ಯೋಳAಡ ಗನೆಶ್ ಸ್ವಾಗತಿಸಿದರು. ತಂಗವ್ವ ಮತ್ತು ದೇಚಮ್ಮ ಸ್ವಾಗತ ನೃತ್ಯ ಮಾಡಿದರು. ಕಾಂಡAಡ ರೇಖಾ ಪೊನ್ನಣ್ಣ ಮತ್ತು ಕುಂಡ್ಯೋಳAಡ ಸ್ವಪ್ನಾ ಪೂವಯ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಕುಂಡ್ಯೋಳAಡ ವಿಶುಪೂವಯ್ಯ ವಂದಿಸಿದರು.

ಅಪರಾಹ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಾ. ೨೯ರಂದು (ಇಂದು) ಸಮಾರೋಪ ಸಮಾರಂಭ ನಡೆಯಲಿದೆ.

-ದುಗ್ಗಳ