ಮಡಿಕೇರಿ, ಮೇ ೨೮ : ಜಿಲ್ಲಾ ಅಗ್ರಣೀ ಬ್ಯಾಂಕ್ ೨೦೨೨-೨೩ ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ವಲಯ ಮಹಾ ಪ್ರಬಂಧಕ ಅನಂತ ಕೆ.ಎಸ್. ಅವರು ಲೀಡ್ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ವಿಶೇಷ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ನಂತರ ಬ್ಯಾಂಕರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್ ನಂತರದ ಸಂದರ್ಭದಿAದ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಸಾಲ ವಿತರಿಸುವುದರ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಸಲಹೆ ನೀಡಿದರು.

ಈ ಬಾರಿಯ ವಾರ್ಷಿಕ ಸಾಲ ಯೋಜನೆಯು “vಚಿಟue ಚಿಜಜiಣioಟಿ oಜಿ ಣhe Pಟಚಿಟಿಣಚಿಣioಟಿ ಚಿಟಿಜ hoಡಿಣiಛಿuಟಣuಡಿe ಠಿಡಿoಜuಛಿe bಥಿ seಣಣiಟಿg uಠಿ oಜಿ ಜಿooಜ ಠಿಡಿoಛಿessiಟಿg uಟಿiಣs” ಗೆ ಹೆಚ್ಚಿನ ಒತ್ತು ನೀಡಿದ್ದು ಜಿಲ್ಲೆಯ ಕೃಷಿಕರಿಗೆ ವರದಾನವಾಗಲಿದೆ ಎಂದು ಸಭೆಗೆ ತಿಳಿಸಿದರು. ೨೦೨೨-೨೩ ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಯನ್ವಯ ರೂ.೫೯೦೦/- ಕೋಟಿ ಗುರಿ ನಿಗದಿಪಡಿಸಿದ್ದು, ಅದರಲ್ಲಿ ೭೮ ಶೇಕಡ (ರೂ. ೪೬೦೦/- ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ. ೩೧೦೦/- ಕೋಟಿ, (೬೭ ಶೇಕಡ) ಹಾಗೂ ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.೭೫೦/- ಕೋಟಿ, (೧೬ ಶೇಕಡ) ಮತ್ತು

(ಮೊದಲ ಪುಟದಿಂದ) ಇತರೆ ಆದ್ಯತಾ ವಲಯಕ್ಕೆ ರೂ.೭೫೦/- ಕೋಟಿ, (೧೬ ಶೇಕಡ) ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ಮಾತನಾಡಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಜನರಿಗೆ ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯನ್ನು ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ನಬಾರ್ಡ್ ಸಂಸ್ಥೆಯು ಬಿಡುಗಡೆ ಮಾಡಿದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕುಗಳ ವಲಯವಾರು ಹಂಚಿಕೆಗಳಿಗನುಸಾರವಾಗಿ ಜೊತೆಗೆ, ಹಿಂದಿನ ವರ್ಷದ ಆಯಾ ಬ್ಯಾಂಕುಗಳ ಸಾಧನೆಗಳನ್ನು ಮಾನದಂಡವಾಗಿಟ್ಟುಕೊAಡು ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರಲ್ಲದೆ ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಮತ್ತು ಆದ್ಯತಾ ವಲಯಕ್ಕೆ ಒತ್ತು ನೀಡುವ ಉದ್ದೇಶದಿಂದ ಗುರಿಯನ್ನು ನಿಗದಿಪಡಿಸಲಾಗಿದೆ ಹಾಗೂ ೨೦೨೨-೨೩ ನೇ ವರ್ಷದಲ್ಲಿ “vಚಿಟue ಚಿಜಜiಣioಟಿ oಜಿ ಣhe Pಟಚಿಟಿಣಚಿಣioಟಿ ಚಿಟಿಜ hoಡಿಣiಛಿuಟಣuಡಿe ಠಿಡಿoಜuಛಿe bಥಿ seಣಣiಟಿg uಠಿ oಜಿ ಜಿooಜ ಠಿಡಿoಛಿessiಟಿg uಟಿiಣs” ಎಂಬುದು ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಸಹಾಯಕ ಮಹಾ ಪ್ರಬಂಧಕ ಯು. ಸೆಲ್ವಕುಮಾರ್, ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾಗಿ ನಿಯುಕ್ತರಾದ ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ಅವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ವಲಯ ಮಹಾ ಪ್ರಬಂಧಕ ಅನಂತ ಕೆ.ಎಸ್. ಅವರು ಎಲ್ಲಾ ಬ್ಯಾಂಕರುಗಳ ಪರವಾಗಿ ಸನ್ಮಾನಿಸಿದರು.