ಕುಶಾಲನಗರ, ಮೇ ೨೭: ಶತಮಾನ ಪೂರೈಸಿ ೧೦೧ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೨ನೇ ಸಾಲಿನಲ್ಲಿ ರೂ.೧.೫೧ ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣ ಕುಮಾರ್ ತಿಳಿಸಿದ್ದಾರೆ. ಅವರು ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಸಂಘ ಕಳೆದ ಸಾಲಿನಲ್ಲಿ ೩೪೦೬ ಮಂದಿ ಸದಸ್ಯರಿಂದ ೩.೦೯ ಕೋಟಿ ರೂ. ಈ ಬಾರಿ ಕಳೆದ ಸಾಲಿಗಿಂತ ಹೆಚ್ಚಿಗೆ ದುಡಿಯುವ ಬಂಡವಾಳ ಕ್ರೋಢೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಘವು ಸ್ವೀಕರಿಸುವ ನಿರಖು ಠೇವಣಿಗಳಿಗೆ ಶೇ. ೭.೫೦ ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಹಾಗೂ ಧಾರ್ಮಿಕ ಸಂಘ-ಸAಸ್ಥೆಗಳಿಗೆ ಶೇ. ಅರ್ಧದಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂದರು.
ಸAಘದಲ್ಲಿ ಕೃಷಿ ಸಾಲ ಜಾಮೀನು ಸಾಲ, ಪರಿವರ್ತಿತ ಜಾಮೀನು ಸಾಲ, ಮಧ್ಯಮಾವಧಿ ಸಾಲ, ಹೈನುಗಾರಿಕೆ, ಕಟ್ಟಡ ಸೇರಿದಂತೆ ಹಲವು ರೀತಿಯ ಸಾಲಗಳನ್ನು ನೀಡುತ್ತಿದ್ದು, ಸಂಘದಿAದ ಒಟ್ಟು ರೂ ೩೮.೬೪ ಕೋಟಿ ಸಾಲ ವಿತರಿಸಲಾಗಿದೆ ಎಂದರು. ಸಂಘದಲ್ಲಿ ೬೩ ಸ್ವಸಹಾಯ ಗುಂಪುಗಳಿದ್ದು ಇವರುಗಳಿಗೆ ಸಂಘದ ಸ್ವಂತ ಬಂಡವಾಳದಿAದ ರೂ.೪೪.೮೦ ಲಕ್ಷದಷ್ಟು ಸಾಲ ವಿತರಿಸಲಾಗಿದೆ ಎಂದರು.
ಸAಘವು ನೂರು ವರ್ಷಗಳನ್ನು ಪೂರೈಸಿ, ಶತಮಾನೋತ್ಸವ ಕಾರ್ಯಕ್ರಮದ ನೆನಪಿಗಾಗಿ ಸದಸ್ಯರಿಗೆ ಉಪಯೋಗವಾಗುವಂತಹ ಬಹುಪಯೋಗಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಶತಮಾನೋತ್ಸವ ಕಾರ್ಯಕ್ರಮವನ್ನು ನಾಡಿನ ಗಣ್ಯ ವ್ಯಕ್ತಿಗಳ ಹಿರಿಯ ಸಹಕಾರಿಗಳ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೊಡಗಿನ ಸಹಕಾರ ವ್ಯವಸ್ಥೆಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಉತ್ತಮ ಸೇವೆಯನ್ನು ಸಂಘ ನೀಡುತ್ತಿದೆ. ಶತಮಾನೋತ್ಸವ ವರ್ಷದಲ್ಲಿ ಸದಸ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಸಂಘದ ಮಹಾಸಭೆ ತಾ. ೨೯ರಂದು ಬೆಳಗ್ಗೆ ೧೧ ಗಂಟೆಗೆ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸದಸ್ಯರ ಮಕ್ಕಳ ಪೈಕಿ ೧೦ನೇ ತರಗತಿ, ದ್ವಿತೀಯ ಪಿಯುಸಿ, ಅಂತಿಮ ಪದವಿ, ಡಿಪ್ಲೊಮಾ ಮತ್ತು ಅಂತಿಮ ಇಂಜಿನಿಯರಿAಗ್ ಪರೀಕ್ಷೆ, ವೈದ್ಯಕೀಯ ಪದವಿ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಿದರು. ಶತಮಾನೋತ್ಸವ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ೧೦೦ ಗಿಡಗಳನ್ನು ನೆಡುವ ಚಿಂತನೆ ಹರಿಸಲಾಗಿದೆ ಎಂದು ಶರವಣ ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ವಿ ಎಸ್ ಆನಂದ್ ಕುಮಾರ್ ಮತ್ತು ಸಂಘದ ನಿರ್ದೇಶಕರುಗಳಾದ ಪಿ.ಬಿ. ಯತೀಶ್, ಪಿ ಕಾರ್ತಿಸನ್, ಎಂ.ಕೆ. ಗಣೇಶ್, ಬಿ.ಎ. ಅಬ್ದುಲ್ ಖಾದರ್, ಹೆಚ್.ಎನ್. ಮಧುಸೂದನ್, ಜಿ.ಪಿ. ಮಧುಕುಮಾರ್, ಡಿ.ವಿ. ರಾಜೇಶ್, ಜಗದೀಶ್, ಕವಿತಾ ಮೋಹನ್, ನೇತ್ರಾವತಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಬಿ. ಲೋಕೇಶ್ ಇದ್ದರು.