ವೀರಾಜಪೇಟೆ, ಮೇ ೨೭: ಮಡಿಕೇರಿಯ ಸೇವಾಭಾರತಿ ವತಿಯಿಂದ ವೀರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ೧೨೦ ಕ್ಕೂ ಅಧಿಕ ಗ್ರಾಮಸ್ಥರು ಆಗಮಿಸಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಸೇವಾಭಾರತಿ ಜಿಲ್ಲಾ ಅಧ್ಯಕ್ಷ ಟಿ.ಸಿ. ಚಂದ್ರನ್, ಆಯೋಜಕ ಪದ್ಮನಾಭ ಟಿ.ಕೆ., ಜೀವನಜ್ಯೊತಿ ಟ್ರಸ್ಟ್ನ ಅಧ್ಯಕ್ಷ ಅಜಯ್‌ರಾವ್,
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಪಂಚಾಯಿತಿ ಸದಸ್ಯರಾದ ಬಶೀರ್ ಹಾಗೂ ಶೇಹದೀರ್ ಅಲಿ, ಸ್ವಯಂ ಸೇವಕ ಸಾದಲಿ, ವೈದ್ಯರಾದ ಶೃತಿ ಆರ್, ಅಭಿಷೇಕ್ ಸಿ. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ರಮಿತ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಅನ್ನಪೂರ್ಣ, ಕವಿತಾ ಹಾಗೂ ಆಶಾ ಕಾರ್ಯಕರ್ತೆಯರಾದ ಶಶಿಕಲಾ, ಉಷಾ, ಸೌಮ್ಯ, ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಉಪಸ್ಥಿತಿ ಇದ್ದರು.