ಕಾವೇರಿ ಮಾತೆಯ ಆದರ್ಶ ಪಾಲನೆ; ನದಿ
ಪ್ರದೇಶದಲ್ಲಿ ನೈರ್ಮಲ್ಯ ನಮ್ಮ ಹೊಣೆ
ಧರ್ಮದ ತಿರುಳನ್ನು ಅರಿಯದೆ, ಗ್ರಂಥಗಳನ್ನು ಅಧ್ಯಯನ ,ಮಾಡದೆ. ದಾರ್ಶನಿಕರ ನೈಜ ಉಪದೇಶ, ಅಮೃತವಾಣಿಗಳನ್ನು ತಿಳಿದುಕೊಳ್ಳದೆ, “ನಮ್ಮ ಧರ್ಮ ಶ್ರೇಷ್ಠ” ಎನ್ನುವ ಮೊಂಡುವಾದದೊAದಿಗೆ ಪರ ಧರ್ಮೀಯರನ್ನು ಸದೆ ಬಡಿಯುವ ಮನೋಭಾವ ವರ್ತನೆಗಳು ಎಲ್ಲ ಧರ್ಮೀಯರಲ್ಲೂ ಅಧಿಕಗೊಳ್ಳುತ್ತಿದೆ. ಸಾಮರಸ್ಯ ಸಾಧಿಸಬೇಕಾದ ಕೆಲವು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಸುಕಿನ ಮರೆಯಲ್ಲಿ ನಿಂತು “ಹೊಡಿ ಬಡಿ, ಚಚ್ಚು, ಕೊಲ್ಲು” ಎನ್ನುವಂತಹ ಹೊಸ ಸಂಸ್ಕೃತಿಗೆ ಬೀಜ ಬಿತ್ತುತ್ತಿದ್ದಾರೆ, ನೀರೆರೆÀದು ಪೋಷಿಸುತ್ತಿದ್ದಾರೆ. ಮಾನವೀಯತೆಯನ್ನು ಕಿತ್ತೊಗೆಯಿರಿ, ಧರ್ಮಾಂಧತೆ ಮುಖ್ಯ, ಮತಾಂತರದ ಮೂಲಕ ಮತ್ತೊಂದು ಧರ್ಮೀಯರ ಸಂಖ್ಯೆ ಕ್ಷೀಣಗೊಳಿಸಿ ನಮ್ಮ ಧರ್ಮೀಯರ ಸಂಖೈಯನ್ನು ಬಲಪಡಿಸಿ, ಬಲಾತ್ಕಾರದ, ಆಮಿಷದ ಮೂಲಕ ಮತಾಂತರಗೊಳಿಸಿ ಎನ್ನುವ ಧ್ಯೇಯ ವಾಕ್ಯಗಳೇ ನಮ್ಮ ಧರ್ಮ ಎನ್ನುವುದನ್ನು ಅನೇಕ ಧಾರ್ಮಿಕ ಗುರುಗಳೆನಿಸಿದವರೇ ನಾಯಕತ್ವ ವಹಿಸಿ ಸಾಧಿಸುವ ದುಷ್ಪç್ಪವೃತ್ತಿಗೆ ಇಳಿದಿದ್ದಾರೆ. ಯುವತಿಯರನ್ನು ತಮ್ಮ ಮತೀಯರ ವಿವಾಹ ಬಂಧನದಲ್ಲಿ ಸಿಲುಕಿಸಿ ಮತಾಂತರಗೊಳಿಸುತ್ತಿರುವ ಹೀನ ಕಾರ್ಯಕ್ಕೆ ಇಳಿದಿದ್ದಾರೆ. ಇಲ್ಲಿ ಧರ್ಮ ಎನ್ನುವದು ಬಲಾಬಲ ಪ್ರದರ್ಶನದ ಕಸರತ್ತಾಗುತ್ತಿದೆ. ಕುಸ್ತಿ ಮೂಲಕ ಗೆಲ್ಲು ಎನ್ನುವ ವಾಮ ಮಾರ್ಗದಿಂದ ಷಡ್ಯಂತ್ರ ನಡೆಸುವ ಅತೀ ನೀಚ ಸ್ವರೂಪದ ಅಖಾಡವಾಗಿ ಪರಿಣಮಿಸುತ್ತಿದೆ. ಇದೆÀಲ್ಲವನ್ನೂ ಸರಿ ಪಡಿಸುರ್ಯಾರು ? ಎಲ್ಲವನ್ನೂ ನೋಡುತ್ತಿರುವ ಪ್ರಕೃತಿ ಮಾತೆಯೇ ಇಂತಹ ಕೃತ್ಯಗಳನ್ನು ತಡೆಯಬೇಕೆನ್ನುವ ಅಸಹಾಯಕತನದ ವಾತಾವರಣ ಮೂಡುತ್ತಿದೆ. ಈ ನಡುವೆ ಉಗ್ರಗಾಮಿತ್ವದ ಮೂಲಕ ದೇಶದಲ್ಲಿ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸುವ ಶತ್ರುಗಳ ಕಾರ್ಯ ಪಡೆ ನಿರಂತರವಾಗಿ ತನ್ನ ದುಷ್ಕಾರ್ಯವನ್ನು ಮುಂದುವರಿಸಿದೆ. ನಮ್ಮ ದೇಶದ ಯೋಧರ ಶಿಬಿರಗಳಿಗೇ ನುಗ್ಗಿ ಧಾಳಿ ಮಾಡಿ ಭಯೋತ್ಪಾದನಾ ಕೃತ್ಯ ಎಸಗುವ ಭಯ ಭೀತಿ ಸೃಷ್ಟಿಸುವ ಅಮಾನವೀಯ ಘಟನೆೆಗಳು ನಿರಂತರವಾಗಿ ಸಾಗುತ್ತಿದೆ. ನಮ್ಮ ದೇಶವನ್ನಾಳುವ ನಾಯಕರು ಸ್ವತಂತ್ರರಾಗಿ ಸಂಚರಿಸಲು ಅಸಾಧ್ಯವಾದ ಭಯೋತ್ಪಾದನಾ ಕೃತ್ಯಗಳು ಹೆಚ್ಚುತ್ತ್ತಿವೆ. ಸದಾ ಭದ್ರತೆ ಯಲ್ಲ್ಲಿರಬೇಕಾದ ಅನಿವಾರ್ಯತೆಯಿದೆ. ನಕ್ಸಲೀಯ ದುಷ್ಕೃತ್ಯಗಳು ಅಧಿಕಗೊಳ್ಳುತ್ತ್ತಿವೆ. ಇದೆÀಲ್ಲವನ್ನೂ ಗಮನಿಸುವಾಗ ಧರ್ಮಗಳ ಹೆಸರಿನಲ್ಲಿಯೇ ದೇಶವನ್ನು ಅತಂತ್ರಗೊಳಿಸುವ ದುಷ್ಟ ಶಕ್ತಿಗಳ ಪಡೆಗಳು ಅಲ್ಲಲ್ಲಿ ನಿರಾತಂಕವಾಗಿ ಕಾರ್ಯ ನಿರ್ವಹಿಸುÀತ್ತಿರುವ ನೈಜ ಚಿತ್ರಣ ಆತಂಕಕಾರಿ ಯೆನಿಸಿದೆ. ಆದರೆ, ಈ ಬಗ್ಗೆ ಗಂಭೀರವಾಗಿ ಚಿಂತಿಸುವ, ದೇಶದ ಕುರಿತಾಗಿ ಕಾಳಜಿ ವ್ಯಕ್ತಪಡಿಸುವ ಯುವ ಪಡೆಯ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಗೊಳ್ಳುತ್ತಿದೆ. ಯುವ ಪಡೆ ಐಟಿ, ಬಿಟಿಯಲ್ಲಿ ಮುಳುಗಿ ತಮ್ಮ ವೈಯಕ್ತ್ತಿಕ, ತಮ್ಮ ನಿಕಟವರ್ತಿಗಳ ಹಿತಾಸಕ್ತಿ ಮಾತ್ರ ಮುಖ್ಯ ಎನ್ನುವ ಸಂಕುಚಿತ ಮನೋಭಾವ, ವ್ಯಕ್ತಿತ್ವದೊಂದಿಗೆ ಮುಂದುವರಿಯುತ್ತಿರುವದು ಈ ದೇಶವನ್ನು ದೇವರೇ ಕಾಪಾಡಬೇಕೇನೋ ಎನ್ನುವಂತಹ ಸ್ಥಿತಿಗೆ ತಲುಪಿಸಿದೆ. ಸಂಘ ಸಂಸ್ಥೆಗಳ ಪೈಕಿ ಬಹುತೇಕ ಸಂಘಟನೆಗಳು ತಮ್ಮ ಸಮೂಹದ ಬೆಳವಣಿಗೆಯತ್ತ ಗುರಿಯಿರಿಸಿ ಹೋರಾಟದ ಅಸ್ತçವನ್ನು ಬಳಸಿಕೊಂಡು ಸ್ವಾರ್ಥ ಸಾಧಿಸಿಕೊಳ್ಳುತ್ತಿ ರುವ ಚಿತ್ರಣ ಹೆಚ್ಚಾಗಿ ಕಂಡುಬರುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯ ಅಯೋಮಯವಾಗುವ ಎಲ್ಲ ಲಕ್ಷಣಗಳು ಈ ಭವ್ಯ ಭಾರತದಲ್ಲಿ ನೆಲೆ ಮಾಡುತ್ತ್ತಿದೆ. ಇದು ನನ್ನ ದೇಶ, ಇದು ನನ್ನ ನಾಡು, ಇದು ನನ್ನ ನೆಲ, ಇದರ ರಕ್ಷಣೆ, ಪೋಷಣೆ ನನ್ನ ಕರ್ತವ್ಯ ಎನ್ನುವ ಭಾವನೆ ಮರೆಯಾಗುತ್ತಿದೆ, ನಾವು ನಿಂತ ನೆಲವನ್ನೇ ತುಚ್ಛೀಕರಿಸುವುದು ನಮ್ಮ ಜನರನ್ನೇ ಅಪಹಾಸ್ಯ ಮಾಡಿದಂತೆ. ಪರಕೀಯರನ್ನು ಪ್ರೀತಿಸುವ, ನಮ್ಮತನವನ್ನು ಕಳೆದುಕೊಂಡು ವಿದೇಶೀ ಸಂಸ್ಕೃತಿಯ ಹುಚ್ಚಾಟದಲ್ಲಿ ದುರ್ವ್ಯಸನಗಳಲ್ಲಿ ತೊಡಗಿಸಿಕೊಂಡು ಉನ್ಮಾದ ಸ್ಥಿತಿಯಲ್ಲಿರುವ ಯುವ ಸಮೂಹದÀ ಸಂಖ್ಯೆ ಈ ದೇಶದಲ್ಲಿ ಹೆಚ್ಚಾಗುತ್ತಿದೆ. ಭಾರತ ಮಾತೆ ಎಂದಾಗ ಇದು ಕೇವಲ ಒಂದು ಸಮುದಾಯಕ್ಕೆ ಸೇರಿದ ಧ್ಯೇಯ ವಾಕ್ಯ. ನಮಗೂ ಇದಕ್ಕೂ ಸಂಬAಧವಿಲ್ಲ. ನಾವೆಂದಿಗೂ ನಮ್ಮ ದೇಶವನ್ನು ಮಾತೃ ಸಮಾನವಾಗಿ ಭಾವಿಸುವುದಿಲ್ಲ, ಅಪ್ಪ್ಪಿತಪ್ಪಿಯೂ ಈ ನೆಲವನ್ನು ನಮ್ಮ ತಾಯಿ ಎಂದು ಭಾವಿಸಲು ಸಾಧ್ಯವಿಲ್ಲ ಎನ್ನುವಂತಹವರ ಸಂಖ್ಯೆ ದೇಶದಲ್ಲಿ ಸಾಕಷ್ಟಿದೆ. ಹೀಗೆ ವಾದಿಸುತ್ತ ನಾವು ಶ್ರೇಷ್ಠರು ಎಂದು ಕಲ್ಪಿಸಿಕೊಂಡಿರುವ ಸ್ವಾರ್ಥ ಸಾಧಕರಿಗೆ ಈ ಮೂಲಕ ಒಂದು ಕಿವಿ ಮಾತು” ನೀವು ಶಾಶ್ವತವಾಗಿ ಈ ಭೂಮಿಯಲ್ಲಿ ವಾಸಿಸುತ್ತೀರ ? ನೀವು ಸಂಪಾದಿಸಿದ ಹಣವನ್ನು ಪರಲೋಕಕ್ಕೆ ಒಯ್ಯುತ್ತೀರಾ?, ನೀವು ಮಾಡುವ ಪಾಪ ಕರ್ಮಗಳಿಂದ ನಿಮ್ಮ ಮನಸ್ಸು, ಆತ್ಮ ಶುದ್ಧವಾಗಿರಬೇಕು ಎಂದರೆ ಸಾಧ್ಯವೇ? ಧರ್ಮ ಎನ್ನುವದು ಪರಸ್ಪರ ಪ್ರೀತಿಯ ಸಂಕೇತವಾಗಬೇಕು, ಧರ್ಮ ಎನ್ನುವದು ಮತ್ತೊಬ್ಬರನ್ನು ಸಹೋದರತ್ವದಲ್ಲಿ ಗುರುತಿಸಿ ಸಂಭಾವಿಸುವ, ಸಂಭಾಳಿಸುವ ಪ್ರವೃತ್ತಿಯನ್ನು ಬೆಳೆಸುವಂತದ್ದಾಗಿದೆ. ಧರ್ಮ ಎನ್ನುವುದು ಬಿದ್ದವನನ್ನು ಜಾತಿ ಮತ ರಾಹಿತ್ಯವಾಗಿ ಎದ್ದೇಳಿಸಿ ಸಂತೈಸುವ ಸುಗುಣ ಶೀಲತೆಯನ್ನು ಮೆರೆಯುವ ಮಹಾನ್ ಆದರ್ಶ ಪ್ರಾಯ ಮಾರ್ಗದರ್ಶಿ ಯಾಗಿದೆ. ಧರ್ಮ ಎನ್ನುವುದು ಅನ್ಯಾಯಕ್ಕೆ ಬಲಿಯಾಗುತ್ತಿರುವ ಮಂದಿಯ ಪರ ವಹಿಸಿ ಅವರಿಗೆ ನೆರವಾಗುವ ಮೂಲಕ ಅವರ ರಕ್ಷಣೆಗೈಯ್ಯುವ ಉತ್ತಮ ವರ್ತನೆಯನ್ನು ಬೋಧಿಸುವ ನೈತಿಕ ಸ್ಥೆöÊರ್ಯದ ಸಂಕೇತವಾಗಿದೆ. ಧರ್ಮ ಎನ್ನುವುದು ಮಹಾವೃಕ್ಷವು ತನ್ನ ನೆರಳನ್ನು ಪಸರಿಸಿ ಕೆಳಗೆ ನಿಂತವರಿಗೆ ತಂಪನ್ನೀಯುವ ಪರ ಹಿತ ಚಿಂತನೆಯ ಪ್ರಾಯೋಗಿಕತೆ ಸಾಧಿಸುವ ವಿಶಾಲತೆ ಯನ್ನು ಬೆಳೆಸುವಂತಾದ್ದಾಗಿದೆ.”
ಎಲ್ಲರೂ ನಮ್ಮೊಳಗೆ ಆಳವಾಗಿ ಚಿಂತಿಸೋಣ. ಇವತ್ತು ನಾವು ಈ ಭೂಮಿಯಲ್ಲಿದ್ದೇವೆ; ಕೆಲ ಕಾಲಾನಂತರ. ವಾಹನದಲ್ಲಿ ಒಂದು ಊರಿಗೆ ತೆರಳಿ ಮರಳಿ ನಮ್ಮ ಮನೆಗೆ ವಾಪಸಾಗುವಂತೆ ನಾವು ಎಲ್ಲಿಂದ ಬಂದೆವೋ ಅಲ್ಲಿಗೆ ಮರಳುತ್ತೇವೆ. ಅಲ್ಲ್ಲಿವರೆÀಗೆ ಈ ಲೋಕದಲ್ಲಿ ನನ್ನ ಮನೆ, ನನ್ನ ಬಂಧು ಬಾಂಧವರು, ನನ್ನ ವಾಹನ, ನನ್ನ ಆಸ್ತಿ, ನನ್ನ ಹಣ, ಬ್ಯಾಂಕ್ ಖಾತೆಯಲ್ಲಿ ಠೇವಣಿ, ಮನೆಯಲ್ಲಿ ಆಭರಣಗಳ ರಾಶಿ,ಇದೆಲ್ಲ ನಾನು ಈ ಜೀವನದಲ್ಲಿ ಸಾಧಿಸಿದ್ದು, ನನ್ನ ಸುಖಕ್ಕೋಸ್ಕರ ನನ್ನವರ ಸುಖ ಸಂತೋಷಕ್ಕೋಸ್ಕರ ಇದೆಲ್ಲ ಮಾಡಿದೆ ಎನ್ನುವ ಪರಿಭ್ರಮೆಯಲ್ಲಿರುವ ನಾವು ಒಂದೊಮ್ಮೆ ದಿಢೀರಾಗಿ ಯಾರಿಗೂ ಹೇಳದೆ ಕೇಳದೆ ಈ ಲೋಕದಿಂದ ಜಾರಿಬಿಡುತ್ತೇವೆ. ಎಷ್ಟೋ ಮಂದಿ ವಿಲ್ ಬರೆಯದೆ, ತಮ್ಮ ಮಕ್ಕಳಿಗೆ ನಮ್ಮ ಆಸ್ತ್ತಿ, ಪಾಸ್ತಿ, ಹಣ, ಆಭರಣದ ರಾಶಿಯ ಮಾಹಿತಿ ನೀಡದೆ ಇಹಲೋಕ ದಿಂದ ಪಯಣಿಸುತ್ತಾರೆ. ಅವರು ಮಾಡಿಟ್ಟ ಸಂಪಾದನೆಯ ರಾಶಿಗಳು ಸಂಬAಧವಿಲ್ಲದ ಇನ್ಯರ್ಯಾರದೋ ಪಾಲಾದ ನೈಜ ಘಟನೆಗಳೂ ಬಹಳಷ್ಟಿವೆ. ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳದೆ ಕೇವಲ ಕೂಡಿ ಹಾಕುತ್ತ ಹೋಗಿ ತಾವೂ ಅನುಭವಿಸದೆ ಈ ಲೋಕದಿಂದ ತೆರಳಿದವರು ಬಹಳಷ್ಟಿದ್ದಾರೆ. ಸತ್ತವರ ಬಗ್ಗೆ ಬದುಕಿದ್ದವರು ಆ ಕ್ಷಣ ದು:ಖೋನ್ಮಾದದಿಂದ ಅಳುವುದು ಸಹಜವೇ. ದಿನದಿಂದ ದಿನಕ್ಕೆ, ಮಾಸದಿಂದ ಮಾಸಕ್ಕೆ ವರ್ಷದಿಂದ ವರ್ಷಕ್ಕೆ ಈ ಎಲ್ಲ ದು:ಖ ದುಮ್ಮಾನಗಳು ಮರೆಯಾಗುತ್ತಾ ಕೊನೆಗೆ ಬಂಧು ಬಾಂಧವರು ಸ್ನೇಹಿತರು ಮತ್ತೆ ತಮ್ಮದೇ ಲೋಕದಲ್ಲಿ ವಿಹರಿಸುವ, ಹೊಸ ಪೀಳಿಗೆ ಪದಾರ್ಪಣೆÉಗೈಯ್ಯುತ್ತಿರುವ ಪ್ರಕ್ರಿಯೆ ಸಹಜವಾಗಿ ನಡೆಯುತ್ತಿರುತ್ತದೆ. ಇಂತಹ ತಾತ್ಕಾಲಿಕವಾದ ಪ್ರಾಪಂಚಿಕ ಬದುಕಿನಲ್ಲಿ ಏನನ್ನಾದರೂ ಸಾಧಿಸಿ ಒಬ್ಬ ವ್ಯಕ್ತಿಗಾದರೂ ಸಣ್ಣ ಉಪಕಾರ ಮಾಡಿರುವದಷ್ಟೇ ಶಾಶ್ವತವಾಗಿ ಉಳಿಯುವ ಪುಣ್ಯ ಎನ್ನುವದಾಗಿದೆ. ಈ ದಿಸೆಯಲ್ಲಿ ನಾವೆಲ್ಲ ಮುನ್ನಡೆಯೋಣ. ಲೋಕಕಲ್ಯಾಣಕ್ಕೋಸ್ಕರ, ಪರರ ಪಾಪ ಪರಿಹರಿಸಿ ಪುಣ್ಯ ಪ್ರದಾನ ಮಾಡುವದಕ್ಕೋಸ್ಕರ, ಲಕ್ಷಾಂತರ ಜನರ ತೃಷೆಯಡಗಿಸಿ ಅವರ ಸುಗಮ ಜೀವನಕ್ಕೋಸ್ಕರ, ಲಕ್ಷಾಂತರ ರೈತರ ನೆಲವನ್ನು ಹಸನುಗೊಳಿಸಲಿಕ್ಕೋಸ್ಕರ, ಲಕ್ಷಾಂತರ ಜನರಿಗೆ ವಿದ್ಯುತ್ ಬೆಳಕನ್ನು ನೀಡುವದಕ್ಕೋಸ್ಕರ ಸದಾ ಜೀವ ನದಿಯಾಗಿ ಹರಿಯುತ್ತಿರುವ ಕೊಡಗಿನ ಕಾವೇರಿ ನಮಗೆಲ್ಲ ಆದರ್ಶ ಪ್ರಾಯಳಾಗಿದ್ದಾಳೆ. ಅವಳ ಮಹಾನ್ ಆದರ್ಶದ ಒಂದು ಸಣ್ಣ ಅಂಶವನ್ನಾ ದರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಆಕೆ ಹರಿಯುತ್ತಿರುವ ಪ್ರದೇಶ ಗಳಲ್ಲಿ ಮಾಲಿನ್ಯದ ಮೂಲಕ ಅನೇಕ ಅಪವಿತ್ರ ಕಾರ್ಯಗಳನ್ನು ಈ ಮಾನವ ನಿರಂತರವಾಗಿ ಮಾಡುತ್ತ್ತಿದ್ದರೂ ಅದೆಲ್ಲವನ್ನೂ ಸಹಿಸಿಕೊಂಡು ಭೂತಾಯಿಯಂತೆ ಸಹನಾ ಶೀಲಳಾಗಿರುವ ಆಕೆಯ ತಾಳ್ಮೆಯನ್ನಾದರೂ ನಮ್ಮ ಜೀವನದಲ್ಲಿ÷ ಪಾಲಿಸೋಣ. ಸಿಟ್ಟಿಗೆ ಈಡಾಗಿ ಇತರರಿಗೆ ತೊಂದರೆ ಕೊಡುವುದನ್ನಾದರೂ ನಿಲ್ಲ್ಲಿಸಲು ಕೊಡಗಿನವರಾಗಿ ನಾವು ನಮ್ಮನ್ನು ಬದಲಾಯಿಸಿಕೊಳ್ಳೋಣ. ಆಕೆಯು ಹರಿಯುವೆಡೆÀಯಾದರೂ ಮಾಲಿನ್ಯ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ. ಮಾಲಿನ್ಯ ಯಾರಾದರೂ ಮಾಡಿದ್ದರೂ ಅದನ್ನು ನಾವೇ ಒಮ್ಮೊಮ್ಮೆ ಪವಿತ್ರ ಕ್ಷೇತ್ರಗಳಲ್ಲಿ ಶುಚೀಕರಿಸು ವಂತಹ ವಿಶಾಲ ವರ್ತನೆ ತೋರೋಣ.ಆಗ ನಮ್ಮ ಬಾಳು ನಿಜಕ್ಕೂ ಸಾರ್ಥಕವಾದೀತು, ಕಾವೇರಿ ಮಾತೆಗೆ ಪ್ರಾಯೋಗಿಕವಾಗಿ ನಾವು ಕೃತಜ್ಞತೆ ಸಲ್ಲ್ಲಿಸಿದÀಂತಾದೀತು ಎನ್ನುವ ಆಶಯ ನನ್ನದು. ಜೊತೆಗೆ, ಕಾವೇರಿ ಕ್ಷೇತ್ರಕ್ಕೆ ತೆರಳುವ ಮಂದಿ ಸಾರ್ವತ್ರಿಕ ಸಹಜವಾದÀ ಉಡುಪುಗಳನ್ನು ಧರಿಸಿ ತೆರಳಲಿ. ತುಂಡುಡುಗೆ ಧರಿಸಿ ಪ್ರವೇಶಿಸದಿರಲಿ. ಅಲ್ಲದೆ, ಅಲ್ಲಿನ ಪಾವಿತ್ರö್ಯತೆಗೆ ತಕ್ಕಂತೆ ವರ್ತಿಸಲಿ. ಆ ಕ್ಷೇತ್ರÀಗÀಳ ಒಳಗೆ ಶ್ರದ್ಧೆಯಿಂದ ನಮಿಸಿ ಧಾರ್ಮಿಕ ಭಾವನೆಗಳಿಗೆ ಒತ್ತು ನೀಡಲಿ. ಈ ಕ್ಷೇತ್ರಗಳನ್ನು ಪ್ರವಾಸೀ ತಾಣದಂತೆ ಅಥವ ಪಿಕ್ನಿಕ್ ಕೇಂದ್ರದÀAತೆ ಹಗುರವಾಗಿ ಪರಿಗಣಿಸಿ ವರ್ತಿಸದಿರಲಿ. ಅಲ್ಲಿನ ಶುದ್ಧ ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ನಡೆದುಕೊಳ್ಳಲಿ. ಈ ದಿಸೆಯಲ್ಲಿ ದೇವಾಲಯಗಳ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಪೊಲೀಸರ ಜವಾಬ್ದಾರಿಕೆಯೂ ಬಹಳವಿದೆ. ನಿರ್ಲಕ್ಷö್ಯ ಹಾಗೂ ಉದಾಸೀನ ಮನೋಭಾವ ಸಲ್ಲದು. ಬಂದವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೆಲವೊಂದು ನಿರ್ಬಂಧಗಳನ್ನು ನೇರವಾಗಿಯೇ ತಿಳಿಯಪಡಿಸಿ ನಿಯಂತ್ರಿಸಬೇಕು. ಇದಕ್ಕಾಗಿ ಆಡಳಿತಕಾರರು ಸೂಕ್ತ ಮಾರ್ಗ ಅನುಸರಿಸಲು ಕ್ರಮಬದ್ಧ ವ್ಯವಸ್ಥೆಯನ್ನು ರೂಪಿಸಿ ಜಾರಿಗೊಳಿಸಿದರೆ ಮತ್ತೆ ಅದು ಒಂದು ಅಭ್ಯಾಸದಂತೆ ಮುಂದುವರಿಯುತ್ತದೆ.
-ಜಿ. ರಾಜೇಂದ್ರ, ಮಡಿಕೇರಿ.