ಚೆಯ್ಯಂಡಾಣೆ, ಮೇ ೨೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೇಲಾವರ, ಕೋಕೇರಿ, ನರಿಯಂದಡ, ಕರಡ, ಅರಪಟ್ಟು ಗ್ರಾಮಗಳಲ್ಲಿ ಬೀಡು ಬಿಟ್ಟ ೩ ಕಾಡಾನೆಗಳನ್ನು ಹಿಡಿಯಲು ಅನುಮತಿ ದೊರೆತಿದ್ದು, ಅರಣ್ಯ ಇಲಾಖೆ ಸಾಕಾನೆಗಳೊಂದಿಗೆ ಆಗಮಿಸಿದೆ.
ಮೈಸೂರು ದಸರಾದಲ್ಲಿ ಪ್ರತಿ ಬಾರಿ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಹಾಗೂ ಅರ್ಜುನ ಈ ತಂಡದಲ್ಲಿವೆ. ಇಂದು ಬೆಳಿಗ್ಗೆ ಆನೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಒಂದು ಆನೆಯನ್ನು ಸೆರೆ ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಗಿದೆ.
ಈ ಸಂದರ್ಭ ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಸಹಕರಿಸಿದರು.
- ಅಶ್ರಫ್