ಮಡಿಕೇರಿ, ಮೇ ೨೮ : ಶಾಸಕರಾದ ಎಂ.ಪಿ.ಅಪಚ್ಚುರAಜನ್ ಅವರು ನಗರದ ದಾಸವಾಳದಲ್ಲಿ ನೂತನವಾಗಿ ನಿರ್ಮಿಸಲಾಗುವ ಉದ್ಯಾನವನ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ದಾಸವಾಳದ ಉದ್ಯಾನವನ ನಿರ್ಮಾಣದ ನಂತರ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ ಉದ್ಯಾನವನ ನಿರ್ವಹಣೆಗೆ ಮನವಿ ಮಾಡಿರುವ ಹಿನ್ನೆಲೆ ಕ್ರಮ ವಹಿಸಲಾಗುವುದು. ನಗರದ ಇತರೆ ಕಡೆಗಳಲ್ಲಿಯೂ ಸಹ ಉದ್ಯಾನವನ ನಿರ್ವಹಣೆಗೆ ಯಾರಾದರೂ ಮುಂದೆ ಬಂದಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪೌರಾಯುಕ್ತ ಎಸ್.ವಿ. ರಾಮದಾಸ್, ನಗರಸಭೆ ಸದಸ್ಯರು ಇತರರು ಇದ್ದರು.