*ಗೋಣಿಕೊಪ್ಪ, ಮೇ ೨೬: ಪೊನ್ನಂಪೇಟೆ ತಾಲೂಕು ಆಡಳಿತ, ತಾ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾ. ೨೮ ರಂದು ಆಯೋಜಿಸಿರುವ ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಪೊನ್ನಂಪೇಟೆ ಸಾಮರ್ಥ್ಯ ಸೌಧದಲ್ಲಿ ನಡೆಯಿತು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದ್ದು, ನ್ಯೂನತೆಯಾಗದಂತೆ ಎಚ್ಚರ ವಹಿಸಬೇಕಿದೆ. ಶಿಸ್ತುಬದ್ಧ ಆಚರಣೆಗೆ ಮುಂದಾಗಬೇಕಿದೆ. ಆಯಾ ಸಮಿತಿಯ ಸದಸ್ಯರು ಜವಬ್ದಾರಿ ನಿಭಾಯಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಪೊನ್ನAಪೇಟೆ ತಾ.ಪಂ. ಆಡಳಿತ ಅಧಿಕಾರಿ ಪಿ. ಲಕ್ಷಿö್ಮ ಮಾಹಿತಿ ನೀಡಿ, ಕಾರ್ಯಕ್ರಮದ ನಿಯಮದಂತೆ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಕುಟುಂಬದವರಿಗೆ ಸನ್ಮಾನ ಮಾಡಲಾ ಗುತ್ತದೆ. ೭೫ ಜನರು ಸನ್ಮಾನ ಸ್ವೀಕರಿಸಲಿ ದ್ದಾರೆ. ಪೊನ್ನಂಪೇಟೆ ಕುಶಾಲಪುರದಲ್ಲಿ ೭೫ ಗಿಡ ನೆಡುವ ಕಾರ್ಯಕ್ರಮವಿದೆ. ಪೊನ್ನಂಪೇಟೆ ಪಟ್ಟಣ ದೀಪಾಲಂಕಾರ, ಮೆರವಣಿಗೆ, ಕನ್ನಡ ಕಳಸ, ವಾಲಗ, ಉಮ್ಮತ್ತಾಟ್, ಬೊಳಕಾಟ್, ಕುಡಿಯ ಜನಾಂಗದ ನೃತ್ಯ, ಎಲ್ಇಡಿ ಪರದೆಯಲ್ಲಿ ಸಾಕ್ಷö್ಯಚಿತ್ರ ಪ್ರದರ್ಶನ, ಬೈಕ್ ರ್ಯಾಲಿ, ವೀರಸಾವ ರ್ಕರ್ ಹಾಗೂ ಭಾರತಾಂಭೆ ಚಿತ್ರ ಪ್ರದರ್ಶನ ಕೂಡ ಇರಲಿದೆ ಎಂದು ತಿಳಿಸಿದರು.
ಪೊನ್ನಂಪೇಟೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೆಸ್ಕ್ ಎಇಇ ನೀಲಶೆಟ್ಟಿ ಅವರಿಗೆ ಸೂಚನೆ ನೀಡಿದರು. ವೇದಿಕೆ ಸಮಿತಿ, ಸ್ವಾಗತ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ಇಒ ಕೊಣಿಯಂಡ ಅಪ್ಪಣ್ಣ ಇದ್ದರು.