ಚೆಯ್ಯಂಡಾಣೆ, ಮೇ ೨೬: ಗುಂಡಿಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್ಐಜಿ ಫ್ಯೂಚರ್ ದುಬೈ ಸಂಘಟನೆಯ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವೀರಾಜಪೇಟೆ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಗುಂಡಿಕೆರೆಯ ಜಾಸ್ಮಿನಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುಂಡಿಗೆರೆ ಜಮಾಅತಿನ ಅಧ್ಯಕ್ಷ ಕೆ ಯು ಮುಹಮ್ಮದ್ ಹಾಜಿ ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ನಡೆಸಬೇಕು ಎಂದರು.
ಇನ್ನೊಬ್ಬ ಮುಖ್ಯ ಅತಿಥಿಗಳಾದ ಜಮಾಅತ್ನ ಮಾಜಿ ಅಧ್ಯಕ್ಷ ಎಂ.ಎ. ಅಬ್ಬಾಸ್ ಅವರು ಮಾತನಾಡಿ ವಿದ್ಯಾರ್ಥಿಗಳು ತಾವು ಹೊಂದಿರುವ ನಿಗದಿತ ಗುರಿಯನ್ನು ಯಾವುದೇ ಸಂದರ್ಭದಲ್ಲೂ ಕೈಬಿಡದೆ ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಮುಖ್ಯೋಪಾಧ್ಯಾಯಿನಿ ಸೀತಮ್ಮ, ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಎಂ.ಎA, ಜಮಾಅತ್ನ ಕಾರ್ಯದರ್ಶಿ ಸಿ.ಪಿ.ಆಲಿ, ದೈಹಿಕ ಶಿಕ್ಷಕ ತಿಮ್ಮಯ್ಯ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ತಕ್ಕಮುಖ್ಯಸ್ಥರಾದ ಶಾದುಲಿ, ಎಚ್ಐಜಿ ಪ್ಯೂಚರ್ ಸಂಘಟನೆಯ ಸ್ಥಾಪಕ ಶಫೀಕ್ ಗುಂಡಿಕೆರೆ, ಮುಹಮ್ಮದ್ ಸಿ.ಯು., ಗ್ಲೊಬಸ್ ಟ್ರಾವೆಲ್ಸ್ ಮಾಲೀಕ ಉಬೈದ್, ಹಮೀದ್ ಸಿ.ಎ.ಎಚ್.ಐ.ಜಿ.ಸಂಘಟನೆಯ ಸದಸ್ಯರುಗಳಾದ ಝಕರಿಯ ಮುಟ್ಟಲ್,ಸಮೀರ್ ಸಿ.ಎಂ, ಜಸೀಲ್ ಸಿ.ಎಂ,ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ರಝಾಕ್,ಶಂಷುದ್ದೀನ್ ಎನ್.ಎಂ,ಮೂಸಾನ್ ಕಂಡತ್ತಿಲ್, ಶಿಕ್ಷಕರುಗಳಾದ ಅಣ್ಣಪ್ಪ, ಲಲಿತ, ಶರೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಧ್ಯಾಪಕಿ ಸುಜಾತ ನಿರೂಪಿಸಿದರೆ, ಹ್ಯಾರಿಸ್ ಮುಸ್ಲಿಯಾರ್ ವಂದಿಸಿದರು.