೧೦ನೇ ತರಗತಿಯ ಫಲಿತಾಂಶ ತಾ. ೧೯ ರಂದು ಪ್ರಕಟವಾಗಿದ್ದು, ಶಾಲಾವಾರು ವಿವರಗಳು ಇಂತಿವೆ:
ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯು ೯೬.೭ ಶೇಕಡ ಪಡೆದಿದೆ. ವಿದ್ಯಾರ್ಥಿಗಳಾದ ವರ್ಷ. ಎ. ೫೮೯, ತೇಜಸ್ ಆರ್.೫೭೯, ಕೃತಿಕ್ ಆರ್. ೫೭೨ ಗಳಿಸಿದ್ದಾರೆ. ಒಟ್ಟು ೩೧ ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ೨೦ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಸುAಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಒಟ್ಟು ೫೮ ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು ೩೧ ಮಕ್ಕಳು ತೇರ್ಗಡೆಗೊಂಡಿದ್ದು, ಫಲಿತಾಂಶ ೫೪% ಪಡೆದುಕೊಂಡಿದೆ.
ಕೂಡಿಗೆ: ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇಕಡ ೧೦೦ ಫಲಿತಾಂಶ ದೊರಕಿದೆ.
ಪರೀಕ್ಷೆಗೆ ಹಾಜರಾಗಿದ್ದ ೪೯ ವಿದ್ಯಾರ್ಥಿಗಳಲ್ಲಿ ೪೦, ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೨೦ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ.
ಶಾಲೆಯ ವಿಶ್ವಾಸ್ (೬೨೦), ಪ್ರವಣ್ ಪೊನ್ನಪ್ಪ (೬೧೯), ಮಂಜುನಾಥ (೬೧೪), ಅನಂದ (೬೧೪) ಪಡೆದು ಮೊದಲ ೩ ಸ್ಥಾನಗಳನ್ನು ಗಳಿಸಿದ್ದಾರೆ.
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ೩೪ ಮಂದಿ ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯ ಮೂವರು ವಿದ್ಯಾರ್ಥಿನಿಯರಾದ ಮಾನ್ಯಶ್ರೀ ಶೇ.೯೯.೩೬ (೬೨೧), ನಿಶ್ಮಾ ಶೇ.೯೮.೪ (೬೧೫), ನಮನಾ ಶೇ.೯೬.೧೬ (೬೦೧) ಶೇ.೯೫ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದು, ೯ ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೨೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶನಿವಾರಸಂತೆ ಪಟ್ಟಣದÀ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರೌಢಶಾಲೆಗೆ ೨೦೨೧-೨೨ನೇ ಸಾಲಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ೧೧೨ ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯ ೮ ವಿದ್ಯಾರ್ಥಿಗಳು ಶೇ.೯೫ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಎಸ್. ಪೂರ್ವಿ ಜಗದೀಶ್ ಶೇ.೯೯.೫೨ (೬೨೨), ಸಿ.ವಿ. ಕೀರ್ತನಾ ಶೇ.೯೯.೩೬ (೬೨೧), ಎಂ.ಎಲ್. ಕೀರ್ತನಾ ಶೇ.೯೮.೮೮ (೬೧೮), ಬಿ.ಕೆ. ಸಾನಿಕಾ ಶೇ.೯೮.೮೮ (೬೧೮) ಅಂಕ ಗಳಿಸಿ ಮೊದಲ ೩ ಸ್ಥಾನಗಳನ್ನು ಪಡೆದಿದ್ದಾರೆ.
೧೧೨ ವಿದ್ಯಾರ್ಥಿಗಳಲ್ಲಿ ೭೪ ಮಂದಿ ಅತ್ಯುನ್ನತ ಶ್ರೇಣಿ, ೩೭ ಮಂದಿ ಪ್ರಥಮ ದರ್ಜೆ, ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ೭ ವಿದ್ಯಾರ್ಥಿಗಳು ಕನ್ನಡದಲ್ಲಿ ಶೇ.೧೦೦ ಫಲಿತಾಂಶ ಪಡೆದಿದ್ದಾರೆ.
ಶನಿವಾರಸಂತೆ ಪಟ್ಟಣದ ಸುಪ್ರಜ ಗುರುಕುಲ ಮತ್ತು ಕಾವೇರಿ ವಿದ್ಯಾಸಂಸ್ಥೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕ್ರಮವಾಗಿ ಶೇ. ೧೦೦ ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸುಪ್ರಜಾ ಗುರುಕುಲದ ವಿದ್ಯಾರ್ಥಿನಿ ವೈ.ಬಿ.ಲಕ್ಷಿö್ಮÃ ಶೇ. ೯೮.೫೬ (೬೧೬), ವಿದ್ಯಾರ್ಥಿ ವೈ.ಬಿ. ಲಕ್ಷö್ಯ ಶೇ. ೯೫.೩೬ (೯೫.೩೬), ಎಂ.ಯು. ಗೌತಮ್ ಶೇ. ೯೫.೦೫ (೫೯೪) ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕಾವೇರಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿನಿ ಎಚ್.ಎ. ಪಂಚಮಿ ಶೇ.೯೮ (೬೧೨) ಅಂಕ ಗಳಿಸಿ ಸಾಧನೆ ತೋರಿದ್ದಾರೆ. ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆ ಬಾಲಿಕಾ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೭ ಫಲಿತಾಂಶ ಲಭಿಸಿದೆ.
ಹಾಕತ್ತೂರು: ಸರ್ಕಾರಿ ಪ್ರೌಢಶಾಲೆ ಹಾಕತ್ತೂರು ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶವನ್ನು ಪಡೆದುಕೊಂಡಿದೆ. ಇವರಲ್ಲಿ ತಾಜುನ್ನೀಸಾ ಸಿ.ಎಂ. ೬೨೫ಕ್ಕೆ ೬೦೫ ಅಂಕ ಗಳಿಸುವುದರೊಂದಿಗೆ ಶಾಲೆಗೆ ಮೊದಲನೇ ಸ್ಥಾನ, ಮುರ್ಶಿದಾ ಕೆ.ಎ. ೬೨೫ಕ್ಕೆ ೬೦೪ ಅಂಕ ಗಳಿಸುವುದರೊಂದಿಗೆ ಎರಡನೇ ಸ್ಥಾನ ಹಾಗೂ ಪ್ರಿಯಾಂಕ ಎಲ್.ಜಿ. ೬೨೫ಕ್ಕೆ ೫೯೫ ಅಂಕ ಗಳಿಸುವುದರೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು ೨೮, ಅತ್ಯುನ್ನತ ಶ್ರೇಣಿ ೧೮ ಮತ್ತು ಪ್ರಥಮ ದರ್ಜೆ ೧೦ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು ತಿಳಿಸಿದ್ದಾರೆ.
ಪಾರಾಣೆ : ಇಲ್ಲಿನ ಪ್ರೌಢಶಾಲೆಗೆ ಶೇ.೧೦೦ ಫಲಿತಾಂಶ ದೊರೆತಿದೆ. ಉನ್ನತ ಶ್ರೇಣಿಯಲ್ಲಿ ೭, ಪ್ರಥಮ ೨೦ ಹಾಗೂ ದ್ವಿತೀಯ ಸ್ಥಾನದಲ್ಲಿ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಸಾನಿಯ ಕೆ.ಯು ೫೯೪ (ಶೇ.೯೫.೦೪) ಅಂಕದೊAದಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಸುಹಾನ ಕೆ.ಯು ೫೯೦ ಹಾಗೂ ಫಾತಿಮತ್ ಇಸ್ಫಾನ ಡಿ.ಐ ೫೭೭ ಅಂಕ ಪಡೆದಿದ್ದಾಳೆ.