ಸೋಮವಾರಪೇಟೆ, ಮೇ ೨೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಕ್ಕೆಹೊಳೆ ಸಮೀಪ ನೂತನವಾಗಿ ಪ್ರಯಾಣಿಕರ ಬಸ್ ತಂಗುದಾಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ಇದು ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗ ಕಲ್ಪಿಸಿದೆ.

ಸುತ್ತಮುತ್ತಲಿನ ಹೊಟೇಲ್, ಕ್ಯಾಂಟೀನ್ ಸೇರಿದಂತೆ ನಿವಾಸಿಗಳು ಇದೇ ಕೇಂದ್ರದಿAದ ಫಿಲ್ಟರ್ ನೀರು ಪಡೆಯುತ್ತಿದ್ದು, ಇದೀಗ ನೀರು ಸರಬರಾಜು ದಿಢೀರ್ ಸ್ಥಗಿತಗೊಂಡಿದೆ. ಇದರಿಂದಾಗಿ ಸ್ಥಳೀಯರು ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟಕದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಬಿಂದಿಗೆ, ಬಾಟಲ್‌ಗಳನ್ನು ಘಟಕದ ಬಳಿ ತಂದು ಖಾಲಿ ಕೊಡದೊಂದಿಗೆ ಹಿಂತಿರುಗುವAತಾಗಿದೆ. ಈ ಬಗ್ಗೆ ಸಂಬAಧಿಸಿದವರು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಘಟಕಕ್ಕೆ ನೀಡಲಾಗಿದ್ದ ವಿದ್ಯುತ್ ಸಂಪರ್ಕದ ಬಿಲ್ ಪಾವತಿಯಾಗದ ಹಿನ್ನೆಲೆ, ಘಟಕದ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರು ಲಭಿಸುತ್ತಿಲ್ಲ. ಈ ಬಗ್ಗೆ ಸಂಬAಧಿಸಿದ ನಿರ್ವಹಣೆಗಾರರು ತಕ್ಷಣ ಕ್ರಮವಹಿಸಬೇಕೆಂದು ಹಾನಗಲ್ಲು ಗ್ರಾಮದ ಪೊನ್ನಪ್ಪ, ರಾಜು, ಸುಧೀಶ್, ರಮೇಶ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.