ಮಡಿಕೇರಿ, ಮೇ ೨೪: ಕೊಡಗು ಕೃಷಿ ವಿಜ್ಞಾನ ವೇದಿಕೆ ವತಿಯಿಂದ ಅಧಿಕ ಉತ್ಪಾದಕತೆಗಾಗಿ ಮಣ್ಣಿನ ಸುಸ್ಥಿರ ಆರೋಗ್ಯ ಮತ್ತು ಫಲವತ್ತತೆಯ ನಿರ್ವಹಣೆ ಕುರಿತು ತಾ. ೩೦ ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಡಾ. ಜೆ.ಎಂ. ದೇವಗಿರಿ, ಕೊಡಗು ಕೃಷಿ ವಿಜ್ಞಾನ ವೇದಿಕೆಯು ನೋಂದಾಯಿತ ಸರ್ಕಾರೇತರ ಸಂಸ್ಥೆಯಾಗಿ ಸುಮಾರು ೨೫ ವರ್ಷಗಳಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು ೨೫೦ ಸದಸ್ಯರನ್ನು ಸಂಘಟನೆ ಹೊಂದಿದ್ದು, ರೈತರಲ್ಲಿ ಕೃಷಿ ತಾಂತ್ರಿಕತೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಾ. ೩೦ ರಂದು ಬೆಳಿಗ್ಗೆ ೯.೩೦ರಿಂದ ವಿಚಾರ ಸಂಕಿರಣ ಆರಂಭಗೊಳ್ಳಲಿದ್ದು, ಪ್ರಾತ್ಯಕ್ಷಿತೆಗಳ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿ.ಆರ್. ರಾಮಕೃಷ್ಣ ಪರಮ ಅವರು ಕಾಫಿಯ ಉತ್ಪಾದಕತೆ ಹೆಚ್ಚಿಸುವಲ್ಲಿ ಸುಸ್ಥಿರ ಮಣ್ಣಿನ ನಿರ್ವಹಣೆ ವಿಷಯ ಮಂಡಿಸಲಿದ್ದಾರೆ. ಸುಸ್ಥಿರ ಕೃಷಿ ಉತ್ಪಾದನೆಗೆ ಜೈವಿಕ ಗೊಬ್ಬರಗಳ ಬಳಕೆ ವಿಚಾರದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಈ.ಪಿ. ಬ್ರಹ್ಮಪ್ರಕಾಶ್, ಕೃಷಿಯಲ್ಲಿ ಉತ್ತಮ ಪೋಶಕಾಂಶ ನಿರ್ವಹಣೆ ಹಾಗೂ ಉತ್ಪಾದಕತೆಗಾಗಿ ವಿಜ್ಞಾನ ಮತ್ತು ತಾಂತ್ರಿಕತೆ ವಿಷಯದ ಬಗ್ಗೆ ಕ್ರಿಯಜೆನ್ ಅಗ್ರಿ ಮತ್ತು ಬಯೋಟೆಕ್ ಕಂಪೆನಿಯ ಅಧ್ಯಕ್ಷ ಡಾ. ಬಸವರಾಜ್ ಗಿರೇನವರ್, ಇಶಾ ಪ್ರತಿಷ್ಠಾನದ ಮಣ್ಣನ್ನು ಉಳಿಸಿ ಅಭಿಯಾನದ ಬಗ್ಗೆ ಇಶಾ ಯೋಗ ಶಿಕ್ಷಕ ಅಭಿನಂದನ್ ವಿಚಾರ ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಚಾರ ಸಂಕಿರಣದೊAದಿಗೆ ಕೃಷಿ ತಂತ್ರಜ್ಞಾನಕ್ಕೆ ಸಂಬAಧಪಟ್ಟ ವಿಚಾರ ಸಂಕಿರಣದೊAದಿಗೆ ವಸ್ತು ಪ್ರದರ್ಶನಗಳನ್ನು ಕೂಡ ಆಯೋಜಿಸಲಾಗಿದೆ. ಅಂದಾಜು ೬೦೦ ರಿಂದ ೭೦೦ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಶಿಬಿರದಲ್ಲಿ ಭಾಗವಹಿಸುವವರು ರೂ. ೨೫೦ ಶುಲ್ಕ ಪಾವತಿಸಿ ನೋಂದಣಿ ಮಾಡಬೇಕೆಂದು ಮನವಿ ಮಾಡಿಕೊಂಡ ಅವರು, ಹೆಚ್ಚಿನ ಮಾಹಿತಿಗೆ ೯೪೮೦೬೧೬೭೧೭, ೯೪೮೦೦೮೪೭೪೦ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದರು.
ಗೋಷ್ಠಿಯಲ್ಲಿ ವೇದಿಕೆಯ ಮಾಜಿ ಅಧ್ಯಕ್ಷ ಎಂ.ಎ. ಕುಟ್ಟಣ್ಣ, ಉಪಾಧ್ಯಕ್ಷ ಕೆ.ವಿ. ತಿಮ್ಮಯ್ಯ, ಸಹಕಾರ್ಯದರ್ಶಿ ಡಾ. ರವಿಕುಮಾರ್, ಪದಾಧಿಕಾರಿ ಶಾಂ ಅಯ್ಯಪ್ಪ ಹಾಜರಿದ್ದರು.