ನಾಪೋಕ್ಲು, ಮೇ ೨೪: ಸರಕಾರ ಜನರ ಮೂಲಭೂತ ಸೌಕರ್ಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸಿದ್ದು ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳೇ ನೇರ ಕಾರಣರಾಗಿದ್ದು ಕೆಲಸ ಮಾಡಲು ಬಾರದ ಅಧಿಕಾರಿಗಳು ಜಿಲ್ಲೆಯಿಂದ ವರ್ಗಾವಣೆ ತೆಗೆದು ಕೊಂಡು ಹೋಗಲಿ; ಇಲ್ಲದಿದ್ದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಾಲೂರು ಮಹಾಲಿಂಗೇಶ್ವರ ದೇವಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆ ಯಡಿಯಲ್ಲಿ ಮನೆ ಮನೆ ಶುದ್ಧ ಕುಡಿಯುವ ನೀರಿನ ರೂ.೩.೧೫ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಸ್ಥರು ಕಳಪೆ ಕಾಮಗಾರಿಯ ಬಗ್ಗೆ ಗುತ್ತಿಗೆದಾರರು ಇನ್ನೊಬ್ಬರ ಹೆಸರನ್ನು ಹೇಳಿ ಅವರ ಹೆಸರಿಗೆ ಭಂಗ ತರುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆದಾಗ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಗೆ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ರೂ. ೨೦೦ ಕೋಟಿಯಷ್ಟು ಹಣ ಮಂಜೂರಾಗಿದೆ. ಇದರ ಸದುಪಯೋಗವನ್ನು
(ಮೊದಲ ಪುಟದಿಂದ) ಪಡೆದುಕೊಳ್ಳುವಂತೆ ಕೋರಿದರು. ಬೆಟ್ಟಗೇರಿ ಗ್ರಾಮ ಪಂಚಾಯಿತಿ ವಿಭಾಗದ ಕಾರುಗುಂದಕ್ಕೆ ೩೦.೫೯ ಲಕ್ಷ, ಕಡಿಯತ್ತೂರಿಗೆ ೫೨.೪೦ ಲಕ್ಷ, ಹೆರವನಾಡಿಗೆ ೬೨.೪೧ ಲಕ್ಷ, ಅರ್ವತೊಕ್ಲುವಿಗೆ ೪೩.೦೮, ಬೆಟ್ಟಗೇರಿಗೆ ೬೬.೮೪ ಮತ್ತು ಪಾಲೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಒಟ್ಟು ೩.೧೫ ಕೋಟಿ ಹಣವನ್ನು ಮಂಜೂರು ಮಾಡಿದ್ದು, ಗುತ್ತಿದಾರರು ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲು ಪ್ರಯತ್ನಿಸಬೇಕೆಂದರು.
ಈ ಸಂದರ್ಭ ಪಾಲೂರು ದೇವಾಲಯದ ಅರ್ಚಕ ದೇವಿಪ್ರಸಾದ್, ಆಡಳಿತ ಮಂಡಳಿಯವರು, ಗ್ರಾಮಸ್ಥರು ದೇವಾಲಯದಲ್ಲಿ ಅಡುಗೆ ಮನೆ ಮತ್ತು ಗ್ರಾಮ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು
ತಳೂರು ಕಿಶೋರ್ ಕುಮಾರ್ ವಿ.ಎಸ್.ಎಸ್.ಎನ್. ಅಧ್ಯಕ್ಷ, ಚೆರುಮಂಡ ಸತೀಶ್ ಸೋಮಣ್ಣ, ಬೆಟ್ಟಗೇರಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ, ಎಡಿಕೇರಿ ವಾಸುದೇವ ವಿ.ಎಸ್.ಎಸ್.ಎನ್ ನಿರ್ದೇಶಕ, ಬೆಪ್ಪುರನ ಮೇದಪ್ಪ ಆರ್.ಎಂ.ಸಿ. ಮಾಜಿ ಅಧ್ಯಕ್ಷ, ಬೊಳ್ಳಿಯಂಡ ಹರೀಶ್, ಕೊಡಪಾಲು ಗಪ್ಪು ಗಣಪತಿ, ಬಿ.ಎ. ರಾಮಣ್ಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯ ತಳೂರು ದಿನೇಶ್, ಪೊದವಾಡ ಮೀನಾಕ್ಷಿ, ಬಿ.ಆರ್. ಸುಶೀಲ ರಾಮಣ್ಣ, ಗಂಗಮ್ಮ, ಕಂದಾಯ ಪರಿವೀಕ್ಷಕ ರವಿ ಕುಮಾರ್, ಅಭಿಯಂತರ ಅಂಬೇಡ್ಕರ್, ಅಭಿಯಂತರೆÀ ಕೃತಿಕಾ, ಪಿ.ಡಿ.ಓ ಉದಯ ಮತ್ತಿತರರು ಇದ್ದರು.
-ವರದಿ: ದುಗ್ಗಳ ಸದಾನಂದ.