*ಸಿದ್ದಾಪುರ ಮೇ ೨೪: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಕೃಷ್ಣಪುರ ರಸ್ತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶಾಸಕರ ಅನುದಾನದಿಂದ ೭೦ ಲಕ್ಷ ರೂ.ಗಳನ್ನು ನೀಡಿದ್ದು, ಸ್ಥಳೀಯ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಡೇರಿದೆ.
ಕಿರಿದಾಗಿದ್ದ ರಸ್ತೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದಾಗ ಬೆಳೆಗಾರರು ಹಾಗೂ ಖಾಸಗಿ ಭೂಮಾಲೀಕರು ಜಾಗವನ್ನು ನೀಡಿ ಸಹಕರಿಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡ ಪ್ರದೀಪ್ ತಿಳಿಸಿದರು.
ಅಭಿಯಂತರ ಎ.ವಿ. ಬಸಪ್ಪ ಅವರು ರಸ್ತೆ ಕಾಮಗಾರಿಯ ನೇತೃತ್ವ ವಹಿಸಿದ್ದು, ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.