ಕಣಿವೆ, ಮೇ ೨೪: ಕುಶಾಲನಗರದ ಬೈಚನಹಳ್ಳಿಯ ಅಂತರ ಘಟ್ಟೆ ಅಮ್ಮನವರ ಸನ್ನಿಧಿಯಲ್ಲಿ ಉಪ್ಪಾರ ಸಮುದಾಯದ ವತಿಯಿಂದ ಭಗೀರಥ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ದೇಶ ಬರಗಾಲದಲ್ಲಿದ್ದಾಗ ನೀರು ಎಲ್ಲಿಯೂ ಸಿಗದಿದ್ದಾಗ ಶಿವನನ್ನು ಒಲಿಸಿ ತಪಸ್ಸು ಮಾಡಿ ಗಂಗೆಯನ್ನು ಧರೆಗಿಳಿಸಿದ ಭಗೀರಥ ಮಹರ್ಷಿಯನ್ನು ಇಡೀ ನಾಡು ಸ್ಮರಿಸಬೇಕು ಎಂದು ಉಪ್ಪಾರ ಸಮುದಾಯದ ಮುಖಂಡ ಪರಮೇಶ್ ಸಾಗರ್ ಹೇಳಿದರು. ಈ ಸಂದರ್ಭ ಅಂತರ ಘಟ್ಟೆಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್, ಜಗದೀಶ್, ಪರಮೇಶ್ ಸಾಗರ್, ಮಲ್ಲೇಶ್, ರವಿ, ಗಿರೀಶ್, ವಿಶ್ವ ಮೊದಲಾದವರಿದ್ದರು.