ಕುಶಾಲನಗರ, ಮೇ ೨೪: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾ. ೨೯ ರಂದು ಸಂಘದ ಸದಸ್ಯರಿಗೆ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಕುಶಾಲನಗರ ಮಾದಾಪಟ್ಟಣ ಅತಿಥಿ ಕಂಫರ್ಟ್ ಹೊಟೇಲ್ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ಎಂ.ಎನ್.ಚAದ್ರಮೋಹನ್ ಅಧ್ಯಕ್ಷತೆಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.
ಬಿಡ್ಡಿಂಗ್ ಪ್ರಕ್ರಿಯೆಗೆ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡಾಕೂಟಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಪರಸ್ಪರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಪಂದ್ಯಾಟಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್, ಕ್ರೀಡಾ ಸಮಿತಿ ಜಿಲ್ಲಾ ಸಂಚಾಲಕ ಮಂಜು ಸುವರ್ಣ, ಕುಶಾಲನಗರ ತಾಲೂಕು ಸಂಚಾಲಕ ಶಿವರಾಜ್, ಉದ್ಯಮಿ ಭಾಸ್ಕರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕುಶಾಲನಗರ ತಾಲೂಕು ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು. ಜಿಲ್ಲೆಯ ೮೬ ಮಂದಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದು ಒಟ್ಟು ೬ ತಂಡಗಳಾಗಿ ವಿಂಗಡಿಸಲಾಗಿದೆ.
ತAಡಗಳ ವಿವರ: ವಿನೋದ್ ಮಾಲೀಕತ್ವದ ಮೀಡಿಯ ಸ್ಟಾರ್ಸ್ ತಂಡದ ನಾಯಕನಾಗಿ ಶಿವರಾಜ್, ಶಂಶುದ್ದೀನ್ ಮಾಲೀಕತ್ವದ ಮೀಡಿಯ ಕಿಂಗ್ಸ್ ತಂಡದ ನಾಯಕನಾಗಿ ಜಯಪ್ರಕಾಶ್, ಬೊಳ್ಳಜ್ಜಿರ ಅಯ್ಯಪ್ಪ ಮಾಲೀಕತ್ವದ ಕ್ಯಾಪ್ಟನ್ ೧೨ ತಂಡದ ನಾಯಕನಾಗಿ ಎ.ಎಸ್. ಮುಸ್ತಫಾ, ಆದರ್ಶ್ ಮಾಲೀಕತ್ವದ ಡ್ರೀಂ ೧೧ ತಂಡದ ನಾಯಕನಾಗಿ ಮಂಜು ಸುವರ್ಣ, ಡಿ.ನಾಗೇಶ್ ಮಾಲೀಕತ್ವದ ಇಂಚರ ನ್ಯೂಸ್ ೧೧ ತಂಡದ ನಾಯಕನಾಗಿ ಪ್ರೇಮ್, ಸುರ್ಜಿತ್ ಮಾಲೀಕತ್ವದ ರಾಕ್ ಸ್ಟಾರ್ಸ್ ತಂಡದ ನಾಯಕನಾಗಿ ದಿವಾಕರ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾಟ ತಾ. ೨೯ ರಂದು ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ.