ಮಡಿಕೇರಿ, ಮೇ ೨೪: ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಕ್ರಾಫ್ಟ್ ಎಕ್ಸ್ಪೋ ತಾ. ೨೯ರಂದು ಮುಕ್ತಾಯಗೊಳ್ಳಲಿದೆ. ೭೦ ಸಾವಿರಕ್ಕೂ ಅಧಿಕ ಬಗೆಯ ವಸ್ತುಗಳು ಇಲ್ಲಿ ದೊರೆಯುತ್ತಿದ್ದು, ಜನರ ಮೆಚ್ಚುಗೆಗೂ ಎಕ್ಸ್ಪೋ ಪಾತ್ರವಾಗಿದೆ. ಹ್ಯಾಂಡ್‌ಲೂಮ್ಸ್ ಮತ್ತು ಹ್ಯಾಂಡಿಕ್ರಾಫ್ಟ್ ವಸ್ತುಗಳು ಇಲ್ಲಿನ ಆಕರ್ಷಣೆಯಾಗಿವೆ.

ಗೃಹಬಳಕೆಯ ವಸ್ತುಗಳು, ಮುತ್ತು, ಬೆಳ್ಳಿ ಆಭರಣಗಳು, ಬಟ್ಟೆಗಳು, ದಿನಬಳಕೆ ವಸ್ತುಗಳು, ಅಲಂಕಾರಿಕ ವಸ್ತುಗಳು, ಕಾರ್ಪೆಟ್‌ಗಳು, ಪೀಠೋಪಕರಣಗಳು ಸೇರಿದಂತೆ ಇಲ್ಲಿ ಪ್ರದರ್ಶನ ಹಾಗೂ ಮಾರಾಟವಾಗುತ್ತಿವೆ.