ಶನಿವಾರಸಂತೆ, ಮೇ ೨೩: ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಗೆ ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅವರು ಭೇಟಿ ನೀಡುವ ಕಾರ್ಯಕ್ರಮ ತಾ. ೨೫ ರಂದು ಸಂಜೆ ೪ ಗಂಟೆಗೆ ಶನಿವಾರಸಂತೆಯ ಹೊಸೂರು ರಸ್ತೆಯಲ್ಲಿರುವ ದೇವ್ ವಿಲೇಜ್ ರೆಸಾರ್ಟ್ನ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಎಚ್.ಟಿ. ಅನಿಲ್, ವಲಯ ಕಾರ್ಯದರ್ಶಿ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್, ಹೇಮಾವತಿ ರೋಟರಿ ಅಧ್ಯಕ್ಷ ಡಿ.ವಿ. ದಿನೇಶ್ ಹಾಗೂ ಕಾರ್ಯದರ್ಶಿ ಯು.ಎಚ್. ಉಮೇಶ್ ಪಾಲ್ಗೊಳ್ಳಲಿದ್ದಾರೆ ಎಂದು ರೋಟರಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.