ವೀರಾಜಪೇಟೆ, ಮೇ ೨೩: ಹಸು ಹಾಗೂ ಕರುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕರು ಬಲಿಯಾದ ಘಟನೆ ಅಂಬಟ್ಟಿ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿ ಗ್ರಾಮದ ತೌಶೀಫ್ ಎಂಬವರಿಗೆ ಸೇರಿದ ಎರಡು ವರ್ಷದ ಕರು ಹುಲಿ ದಾಳಿಗೆ ಬಲಿಯಾಗಿದೆ. ಅಲ್ಲದೆ ಕರುವಿನ ಜೊತೆಯಲ್ಲಿದ್ದ ಹಸುವಿಗೆ ಗಂಭೀರ ಗಾಯಗಳಾಗಿವೆ.

ತಾ.೨೧ರಂದು ಸಂಜೆ ಮೇಯಲು ಬಿಟ್ಟಿದ್ದ ಹಸು ಮತು ಕರುವನ್ನು ಮನೆಯಿಂದ ಅನತಿ ದೂರದಲ್ಲಿದ್ದ ಕೊಟ್ಟಿಗೆಗೆ ಸೇರಿಸಿ ಮನೆಗೆ ಮರಳಿದ್ದಾರೆ. ಅಂದು ರಾತ್ರಿಯ ವೇಳೆಗೆ ಹುಲಿಯೊಂದು ದಾಳಿ ನಡೆಸಿ ಕರುವನ್ನು ಹೊತ್ತೊಯ್ದಿದೆ. ಹಸುವಿನ ಮೇಲೆ ದಾಳಿ ಮಾಡಿದ ಪರಿಣಾಮ ಹಸುವಿಗೆ ಗಂಭೀರವಾದ ಗಾಯಗಳಾಗಿವೆ. ಬೆಳಿಗ್ಗೆ ಮಾಲೀಕರು ಎಂದಿನAತೆ ಕೊಟ್ಟಿಗೆಗೆ ಬಂದು ನೋಡಿದ ಸಂದರ್ಭ ಹಸು ನರಳುತ್ತಿರುವುದು ಕಂಡುಬAದಿದೆ. ಕೊಟ್ಟಿಗೆಯಲ್ಲಿದ್ದ ಕರು ಕಾಣೆಯಾಗಿತ್ತು. ತಾ.೨೨ರಂದು ಹುಡುಕಾಟ ನಡೆಸಿದ ಮಾಲೀಕರು ಸಂಜೆಯ ವೇಳೆಗೆ ಮಗ್ಗುಲ ಗ್ರಾಮಕ್ಕೆ ಹೊಂದಿಕೊAಡಿರುವ ಪಾಳುಬಿದ್ದ ಗದ್ದೆಯಲ್ಲಿ ಕರುವಿನ ಕಳೇಬರ ಪತ್ತೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇಲಾಖೆಯಿಂದ ಪರಿಹಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.

ಘಟನೆಯು ತಿಳಿಯುತಿದ್ದಂತೆ ಈ ಭಾಗದಲ್ಲಿ ನೆಲೆಸಿರುವ ನಿವಾಸಿಗಳು, ಮಕ್ಕಳು ಮತ್ತು ಕಾರ್ಮಿಕರು ಅತಂಕದಿAದ ಮನೆಯಿಂದ ಹೊರಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಎರಡು ಭಾರಿ ಪ್ರತ್ಯಕ್ಷವಾಗಿರುವ ಹುಲಿರಾಯನ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದರು. ಹುಲಿರಾಯನ ಸೆರೆಗೆ ಮುಂದಾಗಲಿಲ್ಲ. ಇಂದು ಜಾನುವಾರಗಳನ್ನು ಬಲಿ ತೆಗೆದುಕೊಂಡಿರುವ ಹುಲಿರಾಯ ಮುಂದೆ ವ್ಯಕ್ತಿಯ ಮೇಲೆ ದಾಳಿ ನಡೆಯುವ ಸಂದರ್ಭ ಎದುರಾಗುಬಹುದು. ಅಂತಹ ಘಟನೆ ನಡೆಯುವ ಮುಂದೆ ಇಲಾಖೆಯು ಎಚ್ಚೆತ್ತುಕೊಳ್ಳಬೇಕು ಅಲ್ಲದೆ ಇಲಾಖೆಯು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.